ಚಾರ್ವಾಕ: ಶೋಭಾ ತವರುಮನೆಯಲ್ಲಿ ಪವರ್ ಕಟ್ ಇಲ್ಲ!

ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರೂ ಆಗಿರುವ ಶೋಭಾ ಮೇಡಂ ಅವರ ತವರು ಮನೆಗೆ ಅಂದಿನಿಂದಲೂ ಅಬಾಧಿತವಾಗಿ ವಿದ್ಯುತ್ ಸರಬರಾಜು ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜತೆಗೆ, ಒಂದೇ ಗ್ರಾಮದಲ್ಲಿ ಈ ಮಲತಾಯಿ ಧೋರಣೆ ಏಕೆ ಎಂದೂ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಚಾರ್ವಾಕ ಮತ್ತು ಕಣಿಯೂರು ಭಾಗಗಳಿಗೆ ಸವಣೂರು ಉಪ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುತ್ತದೆ.
'ನಮ್ಮ ಮನೆಗಳಿಗೆ ದಿನದ ಬಹುತೇಕ ಕಾಲ ಕರೆಂಟು ಇರುವುದಿಲ್ಲ. ಇದಕ್ಕೇ ಒಗ್ಗಿಕೊಂಡು, ನಾವು ಜೀವನ ತಳ್ಳುತ್ತಿದ್ದೇವೆ. ಆದರೆ ರಾಜ್ಯದ ಪ್ರಭಾವಿ ಸಚಿವೆಯಾಗಿರುವ ಶೋಭಾ ಮೇಡಂ ಮನೆ ಮಾತ್ರ ಸದಾ ಬೆಳಗುತ್ತಿರುತ್ತದೆ ಎಂದು ದೂರಿದ್ದಾರೆ.
ಗ್ರಾಮದ ಜನ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಕೃಷಿ ಚಟುವಟಿಕೆ ಕೈಗೊಳ್ಳಲು ಲೋಡ್ ಶೆಡ್ಡಿಂಗ್ ನಿಂದ ತೊಂದರೆಯಾಗುತ್ತಿದೆ. ಆದರೆ ಏನು ಮಾಡೋದು ನಮ್ಮ ಗೋಳು ಯಾರ ಬಳಿ ಹೇಳಿಕೊಳ್ಳೋಣ. MESCOM ಅಧಿಕಾರಿಗಳು ಈ ತಾರತಮ್ಯದ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ.
ಮೇಡಂ ಮನೆಗೆ ನಿರಂತರವಾಗಿ ವಿದ್ಯುತ್ ಕೊಡಲು ಸಾಧ್ಯವಾಗಿರುವಾಗ ನಮ್ಮ ಮನೆಗಳಿಗೆ ಏಕೆ ವಿದ್ಯುತ್ ಕೊಡುತ್ತಿಲ್ಲ? ವಿದ್ಯುತ್ ಸಚಿವೆ ಆಗಿರುವ ಮಾತ್ರಕ್ಕೆ ಅವರು ಹೀಗೆ ಮಾಡಬಹುದಾ? ಪಕ್ಕದ ಮನೆಗಳನ್ನು ಕತ್ತಲುಗೊಳಿಸುವುದು ಎಷ್ಟು ಸರಿ? ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications