ಮಂಗಳಮುಖಿಯರತ್ತ ಶೋಭಾ ನೆರವಿನ ಹಸ್ತ

ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿದ ಮಾತನಾಡಿದ ಸಚಿವೆ ಶೋಭಾ, ಪಡಿತರ ಚೀಟಿಗಾಗಿ ಮಂಗಳಮುಖಿಯರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಕೆಲವು ಅರ್ಜಿಗಳು ಬಂದಿವೆ. ಅವುಗಳನ್ನು ಪರಿಗಣಿಸಿ ಅರ್ಹರಿಗೆ ಪರಿತರ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದರು.
ಮಂಗಳಮುಖಿಯರ ಸಮೀಕ್ಷೆ: ದನ-ಕರು, ಜಾನುವಾರುಗಳ ಬಗ್ಗೆ ಸಮೀಕ್ಷೆ ನಡೆಯುತ್ತದೆ. ಆದರೆ ಮಂಗಳಮುಖಿಯರ ಬಗ್ಗೆ ಇದುವರೆಗೂ ಯಾರೂ ಸಮೀಕ್ಷೆ ನಡೆಸಿಲ್ಲ. ಪಡಿತರ ಚೀಟಿ ವಿತರಣೆಗೆ ಮುನ್ನ ಅಂತಹ ಸಮೀಕ್ಷೆ ಅಗತ್ಯವಾಗಿ ಆಗಬೇಕಿದೆ. ಆದ್ದರಿಂದ ಶೀಘ್ರವೇ ಮಂಗಳಮುಖಿಯರ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದು ಎಂದು ಶೋಭಾ ಹೇಳಿದರು.
ಮಂಗಳಮುಖಿಯರಿಗೆ ಪಡಿತ ಚೀಟಿ ವಿತರಣೆ ಸಂಬಂಧ ಈಗಾಗಲೇ ಕೆಲ ಸಂಘಸಮಸ್ಥೆಗಳೊಂದಿಗೆ ಚಚರ್ಚೆ ನಡೆಸಲಾಗಿದೆ. ಮಂಗಳಮುಖಿಯರಿಗೆ ಯಾವುದೇ ಚೀಟಿ, ವಿಳಾಸ ಇಲ್ಲದ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸುವ ಕಾರ್ಯಕ್ಕೆ ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದೂ ಅವರು ವಿವರಿಸಿದರು.
ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರ ಗೌಡ, ಹಿರಿಯ ಪತ್ರಕರ್ತೆ ಡಾ. ಪೂರ್ಣಿಮಾ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಕಾರ್ಯಕ್ರಮದಲ್ಲಿ ಹಾಜರಿದ್ದರು.












Click it and Unblock the Notifications