ಮಹಿಳೆ ಶವ ಬಾವಿಯಲ್ಲಿ, ಅತ್ಯಾಚಾರ ಶಂಕೆ
ಮಂಗಳೂರು,ಮೇ
4: ಅರೆ ನಗ್ನಾವಸ್ಥೆಯಲ್ಲಿದ್ದ ಮಹಿಳೆಯ ಶವವೊಂದು ಮೂಡುಬಿದಿರೆ ಸಮೀಪ ಬೆಳಾವಿ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮೀಪ ಬಾವಿಯೊಂದರಲ್ಲಿ ಬುಧವಾರ ಪತ್ತೆಯಾಗಿದೆ. id="toptextpromo">ಮೃತ
ಮಹಿಳೆಯನ್ನು ದಲಿತ ಸಮುದಾಯದ ಉಮಾ ಎಂದು ಗುರುತಿಸಲಾಗಿದೆ. 44 ವರ್ಷದ ಈಕೆ ಚುಕುಡ ಎಂಬುವವರ ಪತ್ನಿ ಎಂದು ತಿಳಿದುಬಂದಿದೆ. ಶವದ ಮೇಲೆ ಅನೇಕ ಗಾಯದ ಗುರುತುಗಳಿದ್ದು, ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. id='are-slot-1' class='oiad oi-axt oiadv'> id='top-searched-articles'>ಶವವನ್ನು
ಬಾವಿಯೊಳಕ್ಕೆ ಎಸೆಯುವ ಮುನ್ನ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಚಾರವೆಸಗಿ, ಸಾಯಿಸಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಬಾವಿಯ ಸಮೀಪವಿದ್ದ ರೂಮಿನಲ್ಲಿ ಹರಿದ ರವಿಕೆ, ಬಳೆಗಳು ಕಂಡುಬಂದಿವೆ. ಉಮಾ ಭಾನುವಾರದಿಂದ ನಾಪತ್ತೆಯಾಗಿದ್ದರು. ಆಕೆಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಅತ್ಯಾಚಾರ, ಹತ್ಯೆ ಸಂಭವವನ್ನು ತಳ್ಳಿಹಾಕಿರುವ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications