ಅಮೆರಿಕದಲ್ಲಿ ಎಂಬಿಎ ಸೀಟು ಗಿಟ್ಟಿಸಿದ ದೆಹಲಿ ಟೆಕ್ಕಿ

Follow Oneindia-Kannada on Twitter
ಬೆಂಗಳೂರು, ಮೇ 3: ಇದು ಹೇಳಿ ಕೇಳಿ ಟ್ವಿಟ್ಟರ್ ಜಮಾನ. ಆದರೆ ಅಲ್ಲಿ ಬಳಸಬಹುದಾದ ಅಕ್ಷರಗಳ ಮಿತಿ ಕೇವಲ 140. ಅಷ್ಟರಲ್ಲಿ ಕರಾಕುವಕ್ಕಾಗಿ ನಿಮ್ಮ ಪಾಂಡಿತ್ಯ ಪ್ರದರ್ಶಿಸಿ, ಗುರಿ ತಲುಪಬೇಕಾಗುತ್ತದೆ.

ಇಂಜಿನಿಯರಿಂಗ್ ಅಕ್ಷರಸ್ಥನೊಬ್ಬ ಅದಕ್ಕೆ ತಾಜಾ ಉದಾಹರಣೆಯಾಗಿ ಮಾಹಿತಿ ತಂತ್ರಜ್ಞಾನ ಜಗತ್ತಿಗೆ ವಿಶೇಷವಾಗಿ ಪರಿಚಿತನಾಗಿದ್ದಾನೆ. ಅಷ್ಟೇ ಅಲ್ಲ ಆತ ನಿರಾಯಾಸವಾಗಿ ಅಮೆರಿಕದಲ್ಲಿ 36,400 ಡಾಲರ್ ಶೈಕ್ಷಣಿಕ ವೆಚ್ಚದ MBA ಸೀಟನ್ನು ಗಿಟ್ಟಿಸಿದ್ದಾನೆ. ಆತ ನೋಯ್ಡಾದ 25 ವರ್ಷದ ರಾಹುಲ್ ರಾಠಿ. ಟೆಕ್ ಮಹೀಂದ್ರಾದಲ್ಲಿ ಟೆಕ್ನಿಕಲ್ ಅಸೋಸಿಯೇಟ್. ರಾಹುಲ್ ಮಾಡಿದ್ದು ಇಷ್ಟೇ...

ಅಮರಿಕದ University of Iowa's Tippie School of Management (TSM) ಇತ್ತೀಚೆಗೆ ಟೆಕ್ಕಿಗಳಿಗಾಗಿ ಅಂತಾರಾಷ್ಟ್ರೀಯ ಟ್ವಿಟ್ಟರ್ ಸ್ಪರ್ಧೆ ಆಯೋಜಿಸಿತ್ತು. ಅದರಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು: What makes you an exceptional Tippie full-time MBA candidate and future MBA hire?

Rahul Rathi(@Rathirahul86) ಮೂಲಕ ರಾಹುಲ್ ರಾಠಿ ಅದಕ್ಕೆ ನೀಡಿದ ಉತ್ತರ ಹೀಗಿತ್ತು: In an age where packaging is as imp as content, I present me in a manner that makes me stand out from the crowd. ಉತ್ತರ ಇಷ್ಟೇ ಆಗಿರಲಿಲ್ಲ. ಅದರಲ್ಲಿ ಆಹುಲ್ ಬುದ್ಧಿಮತ್ತೆಗೆ ಸಾಣೆಯಿಡುವಂತಹ ಒಂದಷ್ಟು ಅಡಕಗಳು ದಾಖಲಾಗಿದ್ದವು.

ಈ ಉತ್ತರವನ್ನು ಆತ ತನ್ನ blogಗೆ ಲಿಂಕ್ ಮಾಡಿದ್ದ. ಅಲ್ಲಿತ್ತು... #packaging #tetrapack, #ingredients. ಕೊನೆಗೆ, ರಾಹುಲ್ ಅಂತಃಸತ್ವ ಏನೆಂಬುದು ingredientsನಲ್ಲಿ ಅಡಗಿತ್ತು. ರಾಹುಲನ ಈ ಜಾಣ್ಮೆಗೆ ಅಮೆರಿಕದ TSM ವಿವಿ ಮಂದಿ ತಲೆದೂಗಿ, ಈ ವರ್ಷದ MBA ಸೀಟು ದಯಪಾಲಿಸಿದ್ದಾರೆ. ವಿಶ್ವಮಟ್ಟದಲ್ಲಿ ಹೀಗೆ ಆಯ್ಕೆಯಾಗಿರುವುದು ರಾಹುಲ್ ಒಬ್ಬನೇ. ಇಂದಿನ ಇಂಟರ್ನೆಟ್ ಜಾಲ ಯುವಜನತೆಯನ್ನು ಇನ್ನೂ ಎಲ್ಲೆಲ್ಲಿಗೆ ಕೊಂಡೊಯ್ಯುತ್ತದೋ... ಯಾವುದಕ್ಕೇ ಆಗಲಿ ತಕ್ಷಣ ನೀವು twitter ಗೆ ಅಂಕಿತರಾಗಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+