ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ ನಿವೃತ್ತಿ ನಿವಾಸ ಕೈಬಿಟ್ಟ ರಾಷ್ಟ್ರಪತಿ ಪ್ರತಿಭಾ

By Mahesh
|
Google Oneindia Kannada News

Pratibha Patil
ನವದೆಹಲಿ, ಏ.29: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನಿವೃತ್ತಿ ನಂತರದ ಜೀವನದ ಬಗ್ಗೆ ಎಲ್ಲರಂತೆ ಯೋಜನೆ ಹಾಕಿಕೊಂಡಿದ್ದರು. ಅದರೆ, ಪ್ರತಿಭಾ ಪಾಟೀಲರ ಯೋಜನೆ ಅಡಿಪಾಯ ಕುಸಿದಿದೆ. ರಕ್ಷಣಾ ಪಡೆಗೆ ಸೇರಿದ ಭೂಮಿಯಲ್ಲಿ ವಾಸ್ತವ್ಯ ಹೂಡಲು ಪ್ರತಿಭಾ ಅವರು ಯೋಜಿಸಿದ್ದರು.

ಆದರೆ, ನಿಯಾವಳಿಗಳನ್ನು ಉಲ್ಲಂಘಿಸಿ ರಕ್ಷಣಾ ಪಡೆಯ ಭೂಮಿಯಲ್ಲಿ ಬಂಗಲೆ ನಿರ್ಮಿಸ ಹೊರಟಿದ್ದ ಪ್ರತಿಭಾ ಅವರ ವಿರುದ್ಧ ಆರ್ ಟಿಐ ಕಾರ್ಯಕರ್ತರು ತಿರುಗಿಬಿದ್ದ ಹಿನ್ನೆಲೆಯಲ್ಲಿ ಯೋಜನೆಯನ್ನು ಪ್ರತಿಭಾ ಅವರು ಕೈಬಿಟ್ಟಿದ್ದಾರೆ.

ರಾಷ್ಟ್ರಪತಿ ಪ್ರತಿಭಾ ಅವರಿಗೆ ನಿಮಯ ಉಲ್ಲಂಘಿಸಿ ಮಂಜೂರಾದ ಭೂಮಿ ಬಗ್ಗೆ ಆರ್ ಟಿಐ ಕಾರ್ಯಕರ್ತರು ಹಾಗೂ ಜಸ್ಟೀಸ್ ಫಾರ್ ಜವಾನ್ಸ್ ಎಂಬ ಎನ್ ಜಿಒಗಳು ಮಾಧ್ಯಮಗಳಿಗೆ ವರದಿ ನೀಡಿದ್ದರು.

ಖಾಡಿ ಎಂಬಲ್ಲಿ ನಿರ್ಮಾಣಕಾರ್ಯ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರಪತಿ ತಮ್ಮ ನಿವೃತ್ತಿ ನಿವಾಸಕ್ಕೆ ಹೊಸ ಸ್ಥಳ ಆಯ್ಕೆ ಮಾಡಿರುವ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಭೂ ಮೀಸಲಾತಿ ನೀತಿ ಬದಲಾವಣೆ, ಕಟ್ಟಡಗಳ ಅಕ್ರಮ ನೆಲಸಮ ಹಾಗೂ ಮರಗಳನ್ನು ಕಡಿದಿರುವುದರ ಬಗ್ಗೆ ಆರ್ ಟಿಐ ಕಾರ್ಯಕರ್ತರು ಪ್ರಶ್ನಿಸಿದ್ದರು.

English summary
After facing criticism By RTI activists President Pratibha Patil decided to change her plan to settle in a post-retirement home a defence accommodation in Pune at government expense. RTI welcomed the Pratibha's decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X