• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

AICC ಅಧ್ಯಕ್ಷೆ ಸೋನಿಯಾ ರಾಜ್ಯದಲ್ಲಿ 2 ದಿನ

By Srinath
|
ಬೆಂಗಳೂರು, ಏ.27: ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರ ವೀಕ್ಷೆಣೆ ಮತ್ತು ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ 105ನೆ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಪ್ರಕಾರ ಸೋನಿಯಾ ಮೇಡಂ ಭೇಟಿ ವಿವರ ಹೀಗಿದೆ:

* ಏ. 27ರಂದು ರಾತ್ರಿ 9 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು, ರಾಜಭವನದಲ್ಲಿ ವಾಸ್ತವ್ಯ.

* ಏ. 28ರಂದು ಬೆಳಗ್ಗೆ 8:30ಕ್ಕೆ ಹೆಲಿಕಾಪ್ಟರಿನಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ನಾಗಸಮುದ್ರ ಹಳ್ಳಿಗೆ ಪ್ರಯಾಣ.

* ನಾಗಸಮುದ್ರ ಹಳ್ಳಿಯಲ್ಲಿ ಬರ ಕಾಮಗಾರಿ ಪರಿಶೀಲನೆ.

* ನಾಗಸಮುದ್ರದಲ್ಲಿ ಕೆರೆಗಳ ವೀಕ್ಷಣೆ, ಗ್ರಾಮಸ್ಥರೊಂದಿಗೆ ಮಾತುಕತೆ.

ಚಿತ್ರದುರ್ಗದಿಂದ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಆಗಮನ.

* ಏ. 28ರಂದು ಬೆಳಗ್ಗೆ 11 ಗಂಟೆಗೆ ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮ ಉದ್ಘಾಟನೆ.

* ತುಮಕೂರಿನ ಬಿರ್ಲಾ ಅಡಿಟೋರಿಯಂನಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ.

* ಸಭೆಯಲ್ಲಿ ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಕೆಪಿಸಿಸಿ ಪ್ರವಾಸ ನಡೆಸಿ ತಯಾರಿಸಿದ ವರದಿ ಸಲ್ಲಿಕೆ.

* ಕೆಪಿಸಿಸಿ ಸಭೆಯ ಬಳಿಕ ಬೆಂಗಳೂರಿಗೆ ವಾಪಸ್, ಅಲ್ಲಿಂದ ಮುಂದಕ್ಕೆ ದೆಹಲಿಗೆ ಪ್ರಯಾಣ.

ರಾಜಕೀಯ ಬಣ್ಣ ಬೇಡ: ಸೋನಿಯಾ ಗಾಂಧಿಯ ಕರ್ನಾಟಕ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಪ್ರಚಾರದ ಗಿಮಿಕ್ಕೂ ಅಲ್ಲ, ಕಾರ್ಯಕ್ರಮಕ್ಕೆ ರಾಜಕೀಯದ ಲೇಪ ನೀಡುವುದು ಬೇಡ ಎಂದು ಪರಮೇಶ್ವರ್ ವಿನಂತಿಸಿರುವ ಬೆನ್ನಲ್ಲೇ ...

ಯಾವುದೇ ಸಭಾ ಆಭಾಸ ಆಗುವುದು ಬೇಡವೆಂದು ಸಿದ್ದಗಂಗಾ ಮಠದಲ್ಲಿ ನಡೆಯುವ ಕಾರ್ಯಕ್ರದಲ್ಲಿ ವೇದಿಕೆಯ ಮೇಲೆ ಯಾವುದೇ ರಾಜಕಾರಣಿಗೆ ಸ್ಥಾನ ಕಲ್ಪಿಸಲಾಗಿಲ್ಲ, except Soniaji. ಗಮನಾರ್ಹವೆಂದರೆ, ಇದೇ ಮೊದಲ ಬಾರಿಗೆ ರಾಜಕೀಯ ನಾಯಕರ ಹೊರತಾಗಿ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sonia Gandhis Karnataka itinerary, April 2012: The President of All India Congress Committee (AICC) and United Progressive Alliance (UPA) Smt. Sonia Gandhis 2 day tour of Karnataka. She is scheduled to visit a remote village Nagasamudra in Molakalmuru Tq, Chitradurga District on 28th April. The village is one among hundreds of drought hit places in Karnataka. After visiting the village she will be moving to Tumkur to meet Siddaganga Seer Dr Shivakumara Swamiji. After the meeting Sonia will address members of KPCC. The Congress leader will arrive in Bangalore on the evening of Friday 27th and will stay in Rajbhavan

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more