2ಜಿ ಹಗರಣದಲ್ಲಿ ಚಿದು ಪುತ್ರನ ಕೈವಾಡ ಆರೋಪ

ಏ.24ರಂದು ಪ್ರಧಾನಿ ಅವರಿಗೆ ಕಳುಹಿಸಿರುವ ಪತ್ರದಲ್ಲಿ ಸ್ವಾಮಿ ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ. 2006ರಲ್ಲಿ ಮಲೇಷ್ಯಾ ಮೂಲದ ಮ್ಯಾಕ್ಸಿಸ್ ಕಂಪನಿಯೊಂದಿಗೆ ಏರ್‌ಸೆಲ್ ಮಾರಾಟ ಒಪ್ಪಂದಕ್ಕಾಗಿ ಚಿದಂಬರಂ ತಮ್ಮ ಪುತ್ರ ಕಾರ್ತಿಕ್‌ಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈ ಒಪ್ಪಂದದಲ್ಲಿ ಕಾರ್ತಿಕ್ ಕೈ ಸಾಕಷ್ಟು ಬೆಚ್ಚಗೆ ಮಾಡಲಾಗಿದೆ ಎಂದಿದ್ದಾರೆ ಸ್ವಾಮಿ.
ಏರ್‌ಸೆಲ್ ಕಂಪನಿಯಲ್ಲಿ ತಮ್ಮ ಪುತ್ರ ಕಾರ್ತಿಕ್‌ಗೆ ಶೇರು ನೀಡಿದಲ್ಲಿ ಮಾತ್ರ ಮ್ಯಾಕ್ಸಿಸ್-ಏರ್‌ಸೆಲ್ ಒಪ್ಪಂದಕ್ಕೆ ಪರವಾನಗಿ ನೀಡುವುದಾಗಿ ಚಿದಂಬರಂ ಬೆದರಿಸಿದ್ದರು.
ಏರ್‌ಸೆಲ್ ಕಂಪನಿಯಲ್ಲಿ ಕಾರ್ತಿಕ್ ಶೇರು ಹೊಂದಿರುವ ಅಡ್ವಂಟೇಜ್ ಸ್ಟ್ರಾಟಿಜಿಕ್ ಕನ್ಸಲ್‌ಟಿಂಗ್ ಶೇ.5ರಷ್ಟು ಶೇರುಪಾಲನ್ನು ಹೊಂದಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ.
ಬಹುಕೋಟಿ 2ಜಿ ಹಗರಣದ ತನಿಖೆಯ ವ್ಯಾಪ್ತಿಯನ್ನು ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗಷ್ಟೇ ಸೀಮಿತಗೊಳಿಸದೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇನ್ನಷ್ಟು ವಿಸ್ತರಿಸಿದರೆ ಮತ್ತಷ್ಟು ಸಂಗತಿಗಳು ಬಹಿರಂಗವಾಗುತ್ತವೆ. 2ಜಿ ಹಗರಣದಲ್ಲಿ ಚಿದಂಬರಂ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿರುವ ಸ್ವಾಮಿ, ಅವರ ರಾಜೀನಾಮೆಗೂ ಆಗ್ರಹಿಸಿದ್ದಾರೆ. (ಏಜೆನ್ಸೀಸ್)












Click it and Unblock the Notifications