ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಇನ್ಫೋಸಿಸ್ ಟೆಕ್ಕಿ ಪುತ್ರನ ಅಪಹರಣ ಸುಖಾಂತ್ಯ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  infosys-techie-son-kidnap-rescued-bidar
  ಬೀದರ್, ಏ.26: ಇನ್ಫೋಸಿಸ್ ಕಂಪನಿಯ ಇಂಜಿನಿಯರೊಬ್ಬರ ಆರು ವರ್ಷದ ಪುತ್ರನ ಅಪಹರಣ ಪ್ರಕರಣ ಕೆಲವೇ ಗಂಟೆಗಳಲ್ಲಿ ಬೀದರಿನಲ್ಲಿ ಸುಖಾಂತ್ಯ ಕಂಡಿದೆ.

  ಹೈದರಾಬಾದಿನ ಇನ್ಫೋಸಿಸ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಶಶಿಧರ್ ಎಂಬುವರ ಪುತ್ರ 1 ನೇ ತರಗತಿಯ ವಿದ್ಯಾರ್ಥಿ ವಿರುಪ್ಪಂನನ್ನು ನಗರದ ನಲ್ಲಗಂಡ್ಲಾದಲ್ಲಿರುವ ಡೆಲ್ಲಿ ಪಬ್ಲಿಕ್ ಹೈಸ್ಕೂಲಿನಿಂದ ಮಂಗಳವಾರ ಮಧ್ಯಾಹ್ನ ಅಪಹರಣ ಮಾಡಲಾಗಿತ್ತು.

  ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ತೆರಳುವಾಗ ವಿರುಪ್ಪಂನನ್ನು ಶಶಿಧರ್ ಅವರ ಕಾರಿನ ಚಾಲಕ ಪವನ್ ರೆಡ್ಡಿ ಅಪಹರಿಸಿದ್ದ. ಆರು ವರ್ಷದ ಅಪಹೃತ ಮಗುವನ್ನು ಕಾರಿನಲ್ಲಿ ಕೂಡಿಸಿಕೊಂಡು ವಿಜಯವಾಡದತ್ತ ತೆರಳುತ್ತಿದ್ದ.

  ಹೋಗುವಾರ ಶಶಿಧರ್ ಗೆ ಮೊಬೈಲಿನಲ್ಲಿ SMS ಕಳಿಸಿ ವಿರುಪ್ಪಂನನ್ನು ಅಪಹರಿಸಿರುವುದಾಗಿ ತಿಳಿಸುತ್ತಾ, ಮಗುವಿನ ಸುರಕ್ಷಿತ ಬಿಡುಗಡೆಗಾಗಿ 10 ಲಕ್ಷ ರು. ಒತ್ತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಒಂದೂವರೆ ತಿಂಗಳ ಹಿಂದೆ ಜನವಾಹನ ಸರ್ವಿಸಸ್ ಸಂಸ್ಥೆಗೆ ಸೇರಿದ ಪವನ್ ನನ್ನು ಶಶಿಧರ್ ತಮ್ಮ ಕಾರಿನ ಚಾಲಕನನ್ನಾಗಿ ನೇಮಿಸಿಕೊಂಡಿದ್ದರು.

  ಮಾರ್ಗ ಮಧ್ಯೆ, ಮಾರ್ಗ ಬದಲಿಸಿದ ಪವನ್ ರೆಡ್ಡಿ ಬೀದರಿನತ್ತ ಕಾರನ್ನು ಓಡಿಸಿದ್ದ. ಈ ಮಧ್ಯೆ, ಮಗುವಿನ ಬಗ್ಗೆ ಆತಂಕಕ್ಕೊಳಗಾದ ಶಶಿಧರ್ ಅವರು ತಕ್ಷಣ ಚಂದಾನಗರ ಠಾಣೆಯ ಪೊಲೀಸರಿಗೆ SMS ತೋರಿಸಿ, ಮಗುವನ್ನು ಉಳಿಸಿಕೊಡಿ ಎಂದು ಅಲವತ್ತುಕೊಂಡಿದ್ದಾರೆ.

  Prompt ಆಗಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಮೊದಲು ಮೊಬೈಲ್ ಯಾವ ಟವರ್ ನಿಂದ ಕೆಲಸ ಮಾಡುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ಅವರ ಅರ್ಧ ಕೆಲಸ ಸಲೀಸಾಗಿದೆ. ಮೊಬೈಲ್ ಟವರ್ ಕರ್ನಾಟಕದ ಬೀದರ್ ವ್ಯಾಪ್ತಿಯಲ್ಲಿದೆ ಎಂಬುದನ್ನು ಗ್ರಹಿಸಿದ ಪೊಲೀಸರು ಬೀದರ್ ಪೊಲೀಸರ ನೆರವು ಯಾಚಿಸಿದ್ದಾರೆ.

  ನಾಕಾಬಂದಿ ಹಾಕಿದ ಪೊಲೀಸರು ಕೆಲವೇ ಕ್ಷಣಗಳಲ್ಲಿ ಡ್ರೈವರ್ ಪವನ್ ಸಮೇತ ಕಾರನ್ನು ಪತ್ತೆಹಚ್ಚಿ, ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರಿನೊಳಗೆ ಮಗು ಸುರಕ್ಷಿತವಾಗಿದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಅಪಹರಣ ಪ್ರಕರಣವನ್ನು ಭೇದಿಸಿದ ಚಂದಾನಗರ ಇನ್ಸ್‌ಪೆಕ್ಟರ್ ವೆಂಕಟೇಶ್ವರಲು ತಿಳಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Hyberabad police rescued a six-year-old Virupam who was kidnapped by his driver within hours of the kidnap in Nallagandla on Tuesday (April 24). Virupam is a son of Sasidhar, a group project manager in Infosys. Sasidhar's driver Pavan Reddy had kidnapped the kid. Bidar police rescued the boy with the help of cellphone (used by the driver) signals. 

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more