FY 13ರಲ್ಲಿ 50,000 ಜನರ ನೇಮಕ, ಟಿಸಿಎಸ್

MD N Chandrasekaran
ಮುಂಬೈ, ಏ.24: ಭಾರತದ ಅತಿದೊಡ್ಡ ಸಾಫ್ಟ್ ವೇರ್ ರಫ್ತುದಾರ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(TCS), ಪ್ರಸಕ್ತ ಆರ್ಥಿಕ ವರ್ಷದಲ್ಲಿ 50,000 ಟೆಕ್ಕಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ.

ಕೈಗಾರಿಕಾ ಹಾಗೂ ಮಾರುಕಟ್ಟೆ ಪ್ರಗತಿಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಯೋಜಿಸಲಾಗಿದೆ. 2013-14ರ ಆರ್ಥಿಕ ವರ್ಷದಲ್ಲಿ 50 ಸಾವಿರ ಹೊಸ ನೇಮಕಾತಿಗಳು ನಡೆಯಲಿದೆ ಎಂದು ಟಿಸಿಎಸ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎನ್ ಚಂದ್ರಶೇಖರನ್ ಹೇಳಿದ್ದಾರೆ.

ಉತ್ತರ ಅಮೆರಿಕ ಹಾಗೂ ಯುಕೆ ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಕಾಣಲಾಗಿದ್ದು, ಸಾಗರೋತ್ತರ ವಿಭಾಗದಲ್ಲಿ ಹೆಚ್ಚಿನ ನೇಮಕಾತಿ ನಡೆಯಲಿದೆ ಎಂಬ ಸುಳಿವನ್ನು ಸಿಇಒ ಚಂದ್ರ ಬಿಟ್ಟುಕೊಟ್ಟರು.

ಟಿಸಿಎಸ್ ತಂತ್ರ: ಅಮೆರಿಕದ ಸ್ಥಳೀಯರಿಗೆ ಭಾರತ ಮೂಲದ ಕಂಪನಿಗಳು ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪ, ಆಕ್ಷೇಪಕ್ಕೆ ತಕ್ಕ ಉತ್ತರ ನೀಡಲು ಟಿಸಿಎಸ್ ಸಜ್ಜಾಗಿದೆ. ಈ ಮೂಲಕ ಇನ್ಫೋಸಿಸ್ ಹಾಗೂ ವಿಪ್ರೋಗೆ ಕಠಿಣ ಸವಾಲು ಎಸೆದಿದೆ.

'ಯುಎಸ್ ಎ ನಲ್ಲಿ ಫ್ರೆಶರ್ಸ್ ಅಲ್ಲದೆ, ಅನುಭವಿಗಳಿಗೆ ಮಣೆ ಹಾಕಲಾಗುವುದು. ಅಮೆರಿಕದಲ್ಲಿ ಕ್ಯಾಂಪಸ್ ಸಂದರ್ಶನಗಳನ್ನು ಹೆಚ್ಚಿಸಲಾಗುವುದು. ಪ್ರಾದೇಶಿಕ ಅಸಮತೋಲನ ಸರಿಪಡಿಸಲಾಗುವುದು' ಎಂದು ಜಾಗತಿಕ ಮಾನವ ಸಂಪನ್ಮೂಲ ಅಧಿಕಾತಿ, ಕಾರ್ಯಕಾರು ಉಪಾಧ್ಯಕ್ಷ ಅಜಯ್ ಮುಖರ್ಜಿ ಹೇಳಿದ್ದಾರೆ.

ಸಂಬಳ ಏರಿಕೆ: ಗ್ರೇಡ್ ಹಾಗೂ ಕಾರ್ಯಕ್ಷಮತೆಗೆ ತಕ್ಕಂತೆ ಶೇ 8 ರಷ್ಟು ಸಂಬಳ ಏರಿಕೆ ನಿರೀಕ್ಷಿಸಬಹುದು. ಯುರೋಪ್ ನಲ್ಲಿ ಸಂಸ್ಥೆ ಅಷ್ಟಾಗಿ ಪ್ರಗತಿ ಕಂಡಿಲ್ಲ. ಮುಂದಿನ ತ್ರೈಮಾಸಿಕದಲ್ಲಿ ಎಲ್ಲವೂ ಸರಿ ಹೋಗುವ ಭರವಸೆ ಇದೆ ಎಂದು ಸಿಇಒ ಚಂದ್ರಶೇಖರ್ ಹೇಳಿದರು.

ದಾಖಲೆ ನೇಮಕಾತಿ: 2011-12 ಸಾಲಿನಲ್ಲಿ ಸುಮಾರು 70,400 ವೃತ್ತಿಪರರನ್ನು ನೇಮಕಾತಿ ಮಾಡಿಕೊಂಡು ಹೊಸ ದಾಖಲೆ ಬರೆಯಲಾಗಿದೆ. ಕ್ಯಾಂಪಸ್ ಸಂದರ್ಶನ ಮೂಲಕ ಆಯ್ಕೆಯಾದ 43,600 ಅಭ್ಯರ್ಥಿಗಳು ಮುಂದಿನ ತ್ರೈಮಾಸಿಕದ ಕೊನೆಗೆ ಸಂಸ್ಥೆಯನ್ನು ಸೇರಲಿದ್ದಾರೆ.

attrition rate ಶೇ 12.2 ಆಗಿದೆ. ಟಿಸಿಎ ಉದ್ಯೋಗಿಗಳ ಸರಾಸರಿ ವಯಸ್ಸು 28 ವರ್ಷ. 3 ವರ್ಷ ಅನುಭವ ಇರುವ ಟೆಕ್ಕಿಗಳು ಶೇ 62.4ರಷ್ಟಿದ್ದಾರೆ. ಶೇ 31.6 ರಷ್ಟು ಮಹಿಳಾ ಟೆಕ್ಕಿ ಟಿಸಿಎಸ್ ನಲ್ಲಿ ಉದ್ಯೋಗದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+