ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ವಂಚನೆ ತನಿಖೆ ಶುರು, ಪಾತಾಳಕ್ಕೆ ಇನ್ಫಿ ಷೇರು

By Mahesh
|
Google Oneindia Kannada News

Infosys shares hammered down
ಬೆಂಗಳೂರು, ಏ.23: ಅಮೆರಿಕದ ವೀಸಾ ನೀತಿ, ಬಿಸಿನೆಸ್ ವೀಸಾ ನಿಯಮಗಳನ್ನು ಮೀರಿ ಭಾರತದ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುವ ಮೂಲಕ ದೊಡ್ಡ ವಂಚನೆ ಜಾಲದಲ್ಲಿ ಇನ್ಫೋಸಿಸ್ ಮುಳುಗಿದೆ ಎಂದು ಆರೋಪ ಆಧಾರಿಸಿ US Department of Homeland Security ತನಿಖೆ ಆರಂಭಿಸಿದೆ. ಇತ್ತ ಬಿಎಸ್ಇನಲ್ಲಿ ಇನ್ಫೋಸಿಸ್ ಷೇರುಗಳು ಪಾತಾಳ ಕಂಡಿದೆ.

ಸೋಮವಾರ(ಏ.23) ಶೇ.3.3ರಷ್ಟು ಕುಸಿತ ಕಂಡ ಇನ್ಫೋಸಿಸ್ ಷೇರುಗಳು ಮತ್ತೆ ಚೇತರಿಸಿಕೊಳ್ಳಲು ಕೊಂಚ ಸಮಯ ಬೇಕಾಗುತ್ತದೆ. ಯುಎಸ್ ನಲ್ಲಿ ಆರಂಭವಾದ ತನಿಖೆ ಭಾರಿ ಹೊಡೆತ ಕೊಡುವ ಸಾಧ್ಯತೆ ಇದೆ. ತ್ರೈಮಾಸಿಕ ವರದಿ ಹೊರಬಿದ್ದ ಮೇಲೆ ಷೇರುಗಳು ಕುಸಿಯಲಾರಂಭಿಸಿದ್ದು ಇನ್ನೂ ಮೇಲಕ್ಕೆದ್ದಿಲ್ಲ. ಎಂದು ಇನ್ಫೋಸಿಸ್ ಮೂಲಗಳು ಹೇಳಿದೆ.

ತ್ರೈಮಾಸಿಕದಲ್ಲಿ ನಿರೀಕ್ಷಿತ ಲಾಭ ಗಳಿಸಲು ವಿಫಲವಾಗಿರುವುದು, ಉದ್ಯೋಗಿಗಳಿಗೆ ಇಂಕ್ರಿಮೆಂಟ್ ಕಡಿತಗೊಳಿಸುವುದು, ಅನಿಯಮಿತ ಕೆಲಸದ ಅವಧಿ..ಇತ್ಯಾದಿ ಸಮಸ್ಯೆಗಳ ನಡುವೆ ಇದು ಬೃಹತ್ ಸಮಸ್ಯೆಯಾಗಿ ಇನ್ಫೋಸಿಸ್ ಅನ್ನು ಕಾಡಲಿದೆ.

4ನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 2316 ಕೋಟಿ ರು ಗಳಿಸದರೂ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2.36ರಷ್ಟು ಲಾಭದಲ್ಲಿ ಕಡಿಮೆಯಾಗಿದೆ ಎಂದು ಸಂಸ್ಥೆ ಪೇಚಾಡಿಕೊಂಡಿತ್ತು.

ತ್ರೈಮಾಸಿಕ ಆದಾಯ ಕೂಡಾ 9,200 ಕೋಟಿ ರು ನಷ್ಟು ನಿರೀಕ್ಷೆಯಿತ್ತು. ಆದರೆ, ಆದಾಯ ಬಂದಿದ್ದು ಮಾತ್ರ 8,852 ಕೋಟಿ ರು ಮಾತ್ರ. ಈಗ ಅಮೆರಿಕದ ವೀಸಾ ನೀತಿ ಇಕ್ಕಳದಲ್ಲಿ ಇನ್ಫಿ ಸಿಕ್ಕಿಕೊಂಡಿದೆ.

ಭಾರತದಿಂದ ಕರೆಸಿಕೊಳ್ಳುವ ಉದ್ಯೋಗಿಗಳಿಗೆ ಕಡಿಮೆ ಸಂಬಳ ನೀಡಿ, ಅಮೆರಿಕದ ಉದ್ಯೋಗಾರ್ಥಿಗಳಿಗೆ ವಂಚಿಸುತ್ತಿರುವ ಆರೋಪವೂ ಇನ್ಫೋಸಿಸ್ ಮೇಲೆ ಹೊರೆಸಲಾಗಿದೆ.

ಎಚ್-1ಬಿ ವೀಸಾ ಮೇಲೆ ಯುಎಸ್ ಎ ಕಡಿವಾಣ ಹಾಕಿದ ಮೇಲೆ ಬಿ-1 ವೀಸಾ ಬಳಸಿ ತನ್ನ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದೆ ಎಂದು ಜಾಬ್ ಕನ್ಸಲ್ಟೆಂಟ್ ಪಾಮರ್ ಆರೋಪಿಸಿದ್ದರು. ಆದರೆ, ಆರೋಪಗಳನ್ನು ಇನ್ಫೋಸಿಸ್ ತಳ್ಳಿಹಾಕಿದೆ.

English summary
Shares of Infosys Technologies dropped today (Apr.23) as much as 3.32%, on reports that U.S. authorities are investigating the company for likely errors in employer eligibility documents of its staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X