ಸಿಂಘ್ವಿ ಸಿಡಿ ಹಗರಣ : ಹೈಕೋರ್ಟ್‌ನಿಂದ ತಡೆಯಾಜ್ಞೆ

ಸಿಂಘ್ವಿ ಮೇಲಿನ ಆಕ್ರೋಶದಿಂದ ಅಶ್ಲೀಲ ಎಂಎಂಎಸ್ ನಲ್ಲಿ ವಿಡಿಯೋ ತುಣುಕುಗಳನ್ನು ಸೃಷ್ಟಿಸಲಾಗಿದೆ ಮತ್ತು ಮಾರ್ಪಡಿಸಲಾಗಿದೆ ಎಂದು ಸಿಂಘ್ವಿಯವರ ವಾಹನದ ಚಾಲಕ ಮುಕೇಶ್ ಲಾಲ್ ಹೈಕೋರ್ಟಿಗೆ ಹೇಳಿಕೆ ನೀಡಿದ ಮೇಲೆ ನ್ಯಾಯಮೂರ್ತಿ ಕೇವಾ ಖೇತ್ರಪಾಲ್ ಅವರು ತಡೆಯಾಜ್ಞೆ ನೀಡಿದರು.
ಅಭಿಷೇಕ್ ಮನು ಸಿಂಘ್ವಿ ಮತ್ತು ಚಾಲಕ ಮುಕೇಶ್ ಲಾಲ್ ಇಬ್ಬರು ಕೋರ್ಟ್ ಹೊರಗಡೆ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಇಬ್ಬರ ರಾಜಿ ತೀರ್ಮಾನವನ್ನು ಸ್ವೀಕರಿಸಿರುವ ನ್ಯಾಯಮೂರ್ತಿಗಳು, ಸಿಂಘ್ವಿ ಮತ್ತು ಅವರ ಸಹೋದ್ಯೋಗಿ ಅಭಿಮನ್ಯು ಭಂಡಾರಿ ಅವರು ಹೂಡಿರುವ ಸಿವಿಲ್ ಪ್ರಕರಣದಲ್ಲಿ ಒಪ್ಪಂದದ ಡಿಕ್ರಿ ನೀಡಬೇಕೆಂದು ಆದೇಶಿಸಿದ್ದಾರೆ.
ಕೆಲ ಮಾಧ್ಯಮಗಳ ಪರವಾಗಿ ಹಾಜರಾಗಿದ್ದ ನ್ಯಾಯವಾದಿಗಳು ಆ ಅಶ್ಲೀಲ ಸಿಡಿಯನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸುವುದಿಲ್ಲ ಮತ್ತು ಸಿಡಿಯನ್ನು ಸಿಂಘ್ವಿಗೆ ಒಪ್ಪಿಸಲಾಗುವುದು ಎಂದು ಹೇಳಿಕೆ ನೀಡಿವೆ. ಬಿಹಾರದ ದರ್ಭಂಗಾದ ವ್ಯಕ್ತಿಯೊಬ್ಬನಿಂದ ಪಡೆದುಕೊಂಡ ನಾಲ್ಕು ಅಶ್ಲೀಲ ಸಿಡಿಗಳನ್ನು ತಿರುಚಿ ಇಬ್ಬರು ಪತ್ರಕರ್ತರಿಗೆ ಲಾಲ್ ನೀಡಿದ್ದ.
ಸಿಂಘ್ವಿ ಕಾರಿನ ಚಾಲಕ ಸಿಂಘ್ವಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ ಹಿಂದೆ ಒಂದು ಸ್ವಾರಸ್ಯಕರವಾದ ಹಿನ್ನೆಲೆಯಿದೆ. ಸಿಂಘ್ವಿ ನಾಯಿ ಮುಕೇಶ್‌ನ ಹೆಂಡತಿಗೆ ಕಚ್ಚಿತ್ತು. ನಾಯಿ ಕಚ್ಚಿದ್ದರಿಂದಾಗಿಯೇ ಆಕೆಗೆ ವಿಕಲಾಂಗ ಮಗು ಹುಟ್ಟಿತು ಎಂದು ಲಾಲ್ ಸೇಡಿಗಾಗಿ ತಹತಹಿಸುತ್ತಿದ್ದ. ಹಾಗೆಯೆ, ಸಿಗುತ್ತಿದ್ದ ಕಡಿಮೆ ಸಂಬಳದಿಂದಲೂ ಲಾಲ್ ನಿರಾಶನಾಗಿದ್ದ. ಆತನಿಗೆ ಕೆಲ ಸಿಡಿಗಳು ದೊರೆಯುತ್ತಲೇ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದ.












Click it and Unblock the Notifications