• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಪಾರಿ ಕೊಟ್ಟು ಗಂಡನ ಸಾಯಿಸಿದ ಟೆಕ್ಕಿ

By Srinath
|
techie-wife-gets-her-husband-killed-hyderabad
ಹೈದರಾಬಾದ್,ಏ.20: ಕ್ಯಾಬ್ ಚಾಲಕನೊಂದಿಗೆ ಪ್ರಣಯಕ್ಕಿಟ್ಟುಕೊಂಡ ಟೆಕ್ಕಿಯೊಬ್ಬಳು ಸುಪಾರಿ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿರುವ ಘಟನೆ ಇಲ್ಲಿನ ಷಮೀರ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಡಿಗೆ ಹಂತಕರು ಟೆಕ್ಕಿ ಗಂಡನನ್ನು ಅಪಹರಿಸಿ, ಉಸಿರುಗಟ್ಟಿಸಿ ಏಪ್ರಿಲ್ 10ರಂದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಪಿ ಕಾಶಿರೆಡ್ಡಿ ಗುರುವಾರ ತಿಳಿಸಿದ್ದಾರೆ. ಹತ್ಯೆಗೀಡಾದ 48 ವರ್ಷದ ಶ್ರೀನಿವಾಸ್ ಗಿರಿಕಾಂತ್ ಹಿಮಾಯತ್ ನಗರದಲ್ಲಿ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ instructor ಆಗಿ ಕೆಲಸ ಮಾಡುತ್ತಿದ್ದರು.

ಹೀನಕೃತ್ಯದ ಸೂತ್ರಧಾರಿಣಿ ಎ ವಾಸಂತಿ (39) ಮತ್ತು ಶ್ರೀನಿವಾಸ್ ಅವರು 1994ರಲ್ಲಿ ವಿವಾಹವಾಗಿದ್ದರು. ದಂಪತಿಗೆ 16 ಮತ್ತು 10 ವರ್ಷದ ಗಂಡು ಮಕ್ಕಳಿಬ್ಬರು ಇದ್ದಾರೆ. ಕಾರೊಂದನ್ನು ಖರೀದಿಸಿದ ವಾಸಂತಿ ಕಾರ್ ಚಾಲಕನಾಗಿ 23 ವರ್ಷದ ಚೈತನ್ಯ ವರ್ಮಾನನ್ನು ನೇಮಕ ಮಾಡಿಕೊಂಡಿದ್ದರು.

4 ವರ್ಷಗಳ ಹಿಂದೆ ಟೆಕ್ಕಿ ಕೆಲಸ ಬಿಟ್ಟ ವಾಸಂತಿ, ಆ ನಂತರವೂ ಚೈತನ್ಯ ಇವರ ಕಾರು ಚಾಲಕನಾಗಿ ಮುಂದುವರಿದ. ಈ ಮಧ್ಯೆ ಅವರಿಬ್ಬರ ಮಧ್ಯೆ ನಡೆಯುತ್ತಿದ್ದ ಪ್ರೀತಿ-ಪ್ರೇಮ ಶ್ರೀನಿವಾಸ್ ಅವರ ಕಣ್ಣಿಗೆ ಬಿತ್ತು. ಪತ್ನಿಗೆ ತಿಳಿಯ ಹೇಳಿದರೂ ಪ್ರಯೋಜನವಾಗಿಲಿಲ್ಲ.

ಚಾಲಾಕ ಚಾಲಕ ಚೈತನ್ಯ ತನಗೆ ಬೇಕೆಂದು ವಾಸಂತಿ ಹಠ ಹಿಡಿದಳು. ಶ್ರೀನಿವಾಸ್ ತಮಗೆ ಮುಳ್ಳಾಗಿದ್ದಾನೆ ಎಂದು ನಿರ್ಧರಿಸಿದ ವಾಸಂತಿ, ಚೈತನ್ಯನೊಂದಿಗೆ ಸೇರಿ ಶ್ರೀನಿವಾಸನ ಹತ್ಯೆಗೆ ಪ್ಲಾನ್ ಹಾಕಿದಳು. ಅದಕ್ಕೆಂದೇ ಅತೀಶ್, ಕೃಷ್ಣ ಮತ್ತು ರಂಜಿತ್ ಕುಮಾರ್ ಎಂಬ ಮೂವರು ಹಂತಕರನ್ನು ನಿಯೋಜಿಸಿದಳು. ತನ್ನ ಗಂಡನನ್ನು ಹತ್ಯೆ ಮಾಡಿದರೆ 20 ಲಕ್ಷ ರುಪಾಯಿ ನೀಡುವುದಾಗಿಯೂ ಹೇಳಿದಳು. ಮುಂಗಡವಾಗಿ 15 ಸಾವಿರ ರುಪಾಯಿ ನೀಡಿದ ವಾಸಂತಿ, ಚಿಟ್ ಫಂಡ್ ನಲ್ಲಿ ಹಣ ಬರುವುದಿದೆ. ಅದರಿಂದ ಪೂರ್ತಿ ಹಣ ನೀಡುವುದಾಗಿಯೂ ಮಾತು ಕೊಟ್ಟಳು.

ಸುಪಾರಿ ಕಿಲ್ಲರ್ಸ್, ವಾಸಂತಿ ಮಾತಿನಂತೆ ಏ. 10ರಂದು ಕೆಲಸಕ್ಕೆ ಹೀಗಿದ್ದ ಶ್ರೀನಿವಾಸ್ ಅವರನ್ನು ಅಪಹರಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಕಿ ಹೋಗಿದ್ದರು. ಶವದ ಕೊರಳಲ್ಲಿದ್ದ ID ಟ್ಯಾಗ್ ಮೂಲಕ ಮೃತ ವ್ಯಕ್ತಿಯನ್ನು ಶ್ರೀನಿವಾಸ್ ಎಂದು ಗುರುತಿಸಿದ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಟೆಕ್ಕಿಯ ಪ್ರೇಮ ಪುರಾಣ, ಬಿಚ್ಚಿಕೊಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಅಪಹರಣ ಸುದ್ದಿಗಳುView All

English summary
Hyderabad Techie A.Vasanthi, 39, planned and executed the murder of her husband Srinivas Girik-anth,48, with the help of a gang in Shamirpet police station limits, after she developed an illicit relation with her driver Chaitanya Varma, 23, police said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more