ಹುಡುಗಿಗಾಗಿ ಗೆಳೆಯನನ್ನು ಚೆಚ್ಚಿ ಕೊಂದರು

ಅಂಶ್ ಅಗರ್ ವಾಲ್ ಎಂಬ ವಿದ್ಯಾರ್ಥಿಯನ್ನು ಕನಿಷ್ಠ ಪಕ್ಷ 30ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಕಿ ಸ್ಟಿಕ್ ನಿಂದ ಹೊಡೆದು ಕೊಂದಿದ್ದಾರೆ. ಅಂಶ್ ಗೆಳತಿಗೆ ಪ್ರಮುಖ ಆರೋಪಿ ಎಸ್ ಎಂಎಸ್ ಕಳಿಸಿದ್ದು ಕಿತ್ತಾಟಕ್ಕೆ ಕಾರಣವಾಗಿದೆ.
ತನ್ನ ಗೆಳತಿಗೆ ಎಸ್ ಎಂಎಸ್ ಕಳಿಸಿದ್ದೇಕೆ ಎಂದು ಆರೋಪಿ ವಿದ್ಯಾರ್ಥಿ ಜೊತೆ ಅಂಶ್ ಜಗಳವಾಡಿದ್ದಾನೆ. ಆದರೆ, ಇದಕ್ಕೆ ಕ್ಯಾರೆ ಎನ್ನದ ಆರೋಪಿ ವಿದ್ಯಾರ್ಥಿ ತನ್ನ ಗೆಳೆಯರ ಗುಂಪನ್ನು ಕರೆಸಿಕೊಂಡು ಅಂಶ್ ಮೇಲೆ ದಾಳಿ ಮಾಡಿದ್ದಾನೆ.
ತೀವ್ರವಾಗಿ ತಲೆ ಪೆಟ್ಟು ಬಿದ್ದಿದ್ದ ಪರಿಣಾಮ ಅಂಶ್ ಕುಸಿದಿದ್ದಾನೆ. ಸಾರ್ವಜನಿಕರು ಅಂಶ್ ನನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಂಶ್ ಸಾವನ್ನಪ್ಪಿದ್ದಾನೆ.
ಆರೋಪಿ ವಿದ್ಯಾರ್ಥಿಗಳಲ್ಲಿ ಬಹುತೇಕ ಎಲ್ಲರನ್ನು ಬಂಧಿಸಲಾಗಿದ್ದು, ಗುರುವಾರ(ಏ.19) ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.












Click it and Unblock the Notifications