ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ವಶಪಡಿಸಿಕೊಂಡ ಹಣವನ್ನು FDಗೆ ಹಾಕಿ: ರೆಡ್ಡಿ

By Srinath
|
Google Oneindia Kannada News

put-cbi-seized-cash-infd-janardhana-reddy
ಹೈದರಾಬಾದ್,ಏ.18: Fixed Deposit ಖಾತೆಗಳು ನಿಜಕ್ಕೂ ಅಷ್ಟೊಂದು ಆಕರ್ಷಕವಾಗಿವೆಯಾ? ಅದರಿಂದ ಅಷ್ಟೊಂದು ಬಡ್ಡಿ ಬರುತ್ತದಾ? ಏನಿಲ್ಲಾ ಜೈಲುವಾಸಿಯಾಗಿರುವ ಜನಾರ್ದನ ರೆಡ್ಡಿ ಅವರು 'ಸಿಬಿಐ ವಶಪಡಿಸಿಕೊಂಡಿರುವ ನನ್ನ ಮತ್ತು ನನ್ನ ಭಾವಮೈದುನ ಶ್ರೀನಿವಾಸ ರೆಡ್ಡಿಯ ಅಷ್ಟೂ ಹಣವನ್ನು ಮೊದಲು fixed deposit ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿನ್ನೆ ಅಲವತ್ತುಕೊಂಡಿದ್ದಾರೆ.

ರೆಡ್ಡಿ ಪ್ರಸ್ತುತ ಬೆಂಗಳೂರು ಪರಪ್ಪನ ಅಗ್ರಹಾರ ಜೈಲುಹಕ್ಕಿಯಾಗಿದ್ದರುವುದರಿಂದ ಹೈದರಾಬಾದಿನ ಕೊಠಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ ತಮ್ಮ ವಕೀಲ ಇ. ಉಮಾ ಮಹೇಶ್ವವರ ರಾವ್ ಅವರ ಮೂಲಕ ಕೋರ್ಟಿಗೆ ಈ ವಿಶೇಷ ಮನವಿ ಸಲ್ಲಿಸಿದ್ದಾರೆ.

ವಿಚಾರಣೆ ಮುಕ್ತಾಯವಾದ ನಂತರ ಖಾತೆದಾರರು ಬಡ್ಡಿ ಸಮೇತ ಹಣವನ್ನು ಪಡೆಯಬಹುದು. ಆದ್ದರಿಂದ ಸಿಬಿಐ ವಶಪಡಿಸಿಕೊಂಡ ಕೋಟ್ಯಂತರ ರುಪಾಯಿಗಳನ್ನು ಅವರಿಬ್ಬರ ಹೆಸರಿನಲ್ಲಿ FD ಮಾಡಿಸಿ ಎಂದು ಕೋರ್ಟಿಗೆ ಅಹವಾಲು ಸಲ್ಲಿಸಿದ್ದಾರೆ. ಈ ಹಿಂದೆ ಕೈಯಲ್ಲಿರುವ ಕೋಟ್ಯಂತರ ರೂಪಾಯಿಯಿಂದ ಮತ್ತಷ್ಟು ಕೋಟಿಗಳನ್ನು ಕಮಾಯಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದ ರೆಡ್ಡಿಗಾರು ಈಗ ಬಂದಷ್ಟು ಬರಲಿ, FD ಬಡ್ಡಿಯಾದರೂ ಬರಲಿ ಎಂಬ ಸ್ಥಿತಿ ತಲುಪಿದ್ದಾರೆ.

ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಂದಾಗ ರೆಡ್ಡಿ ವಕೀಲ ಮಹೇಶ್ವವರ ರಾವ್ ಇಂತಹ ಐಡಿಯಾ ಕೊಟ್ಟಿದ್ದಾರೆ. ಸಿಬಿಐ ಸೆ. 5ರಂದು ರೆಡ್ಡಿಯನ್ನು ಕುಠೀರ ಮನೆಯಿಂದ ಎಬ್ಬಿಸಿ ಕರೆದುಕೊಂಡು ಹೋಗುವಾಗ ಸಿಬಿಐ, ಜನಾರ್ದನ ರೆಡ್ಡಿಯ 2.94 ಕೋಟಿ ರು. ಹಾಗೂ ಶ್ರೀನಿವಾಸ ರೆಡ್ಡಿಗೆ ಸೇರಿದ 1.3 ಕೋಟಿ ರು. ಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಹೋಗಿತ್ತು. ಆದರೆ ಆ ಹಣದ ಲೆಕ್ಕಾಚಾರವನ್ನು ರೆಡ್ಡಿಗಳು ಸರಿಯಾಗಿ ತೋರಿಸಿಲ್ಲ. ಆದ್ದರಿಂದ ಅಷ್ಟೂ ಹಣವನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದು ಬೆಂಗಳೂರು IT ಅಧಿಕಾರಿಗಳು ಕೋರ್ಟಿಗೆ ಮೊರೆ ಹೋಗಿದ್ದಾರೆ.

ಈ ಹಣದ ಬಗ್ಗೆ ರೆಡ್ಡಿಗಾರು ಅಕ್ಟೋಬರ್ 31ರೊಳಗೆ I-T returns ಸಲ್ಲಿಸಬೇಕಿತ್ತು. ಆದರೆ ಸೆ. 5ರಂದೇ ಅವರು ಸಿಬಿಐ ಬಂಧನಕ್ಕೀಡಾದರು. ಆದ್ದರಿಂದ ಆ ಹಣ ಅವರಿಗೆ ಸೇರುತ್ತದೆ. ಆದರೆ ಅವರು I-T returns ಸಲ್ಲಿಸದೇ ಇರುವುದರಿಂದ ಅದು ಇಲಾಖೆಗೆ ಸೇರುತ್ತದೆ ಎಂದು I-T ಅಧಿಕಾರಿಗಳು ಕೋರ್ಟ್ ಗಮನ ಸೆಳೆದರು. ಆದರೆ ಚಾಣಾಕ್ಷ ನ್ಯಾಯಾಧೀಶರು 'ನೋಡಿ. ಅವರಿಬ್ಬರ ಹೆಸರಿನಲ್ಲೂ ಇಡುವುದು ಬೇಡ. ಬದಲಿಗೆ ಕೇಸ್ ಸಂಖ್ಯೆಯಲ್ಲಿ FD ಮಾಡಿಸಿಬಿಡಿ' ಎಂದು ಆಜ್ಞಾಪಿಸಿದ್ದಾರೆ.

English summary
Mining baron Gali Janardhan Reddy’s counsel E. Uma Maheswara Rao on Tuesday urged the CBI court in Hyderabad to direct the authorities to put the crores of rupees seized from his residence in fixed deposits in his name. However, the judge said that the money would be put in fixed deposits in the case number but not in the name of the accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X