ಕುರ್ಚಿಗಾಗಿ ಬೇಡುವುದಿಲ್ಲ, ರಕ್ತ ಕುದಿಯುತ್ತಿದೆ:ಯಡಿಯೂರಪ್ಪ

my-blood-is-boiling-bs-yeddyurappa
ಬೆಂಗಳೂರು, ಏ.18: 'ನನ್ನ ದೇಹದೊಳಗೆ ಒಂದೇ ಸಮನೆ ರಕ್ತ ಕುದಿಯುತ್ತಿದೆ. ಆದರೂ, ನಗು-ನಗುತ್ತ ಓಡಾಡುತ್ತಿದ್ದೇನೆ. ಇನ್ನು ಮುಂದೆ ಸುಮ್ಮನಿರುವುದು ನನ್ನಿಂದ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾನು ಯಾರು ಎಂದು ತೋರಿಸುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ವಿರೋಧಿಗಳ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ಪುರಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸವಿತಾ ಸಮಾಜದ ಸಮಾವೇಶ ಉದ್ಘಾಟಿಸಿದ ಅವರು, ಭಾವೋದ್ವೇಗದಿಂದ ತಮ್ಮ ಮನಸ್ಸಿನಲ್ಲಿದ್ದ ದುಗುಡವನ್ನು ಹಂಚಿಕೊಂಡರು.
'ನನಗೂ ಸುಮ್ಮನಿದ್ದು ಸಾಕಾಗಿದೆ. ನಾಲ್ಕೈದು ವರ್ಷಗಳಿಂದ ನಮ್ಮ ಪಕ್ಷದವರಿಂದಲೇ ನನ್ನ ಕಾಲೆಳೆಯುವ ಕೆಲಸ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪ್ರತಿಪಕ್ಷಗಳೂ ಕುತಂತ್ರ ಮಾಡುತ್ತಿವೆ. ನಂಬಿಕೊಂಡವರೇ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಕಾಲೆಳೆಯುವವರು ಯಾರೆಂದು ನಾನು ಈಗ ತಿಳಿಸುವುದಿಲ್ಲ. ಸಂದರ್ಭ ಬರಲಿ' ಎಂದು ಯಡಿಯೂರಪ್ಪ ಗರ್ಜಿಸಿದರು.

ಈಗಲೂ ನನ್ನೊಂದಿಗೆ 70 ಶಾಸಕರಿದ್ದಾರೆ:'ಕಳೆದ ವಿಧಾನಮಂಡಲದ ಅಧಿವೇಶದಲ್ಲಿ ನಾನು ಹಿಂದಿನ ಸ್ಥಾನದಲ್ಲಿ ಕುಳಿತುಕೊಂಡು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಆದರೆ, ನಾನು ಒಂದೂ ಮಾತಾಡಿಲ್ಲ. ಹಾಗಂತ ನನ್ನ ವೌನವನ್ನು ದೌರ್ಬಲ್ಯ ಎಂದು ಭಾವಿಸಬೇಕಿಲ್ಲ' ಎಂದು ನುಡಿದರು.

'ಈಗಲೂ ನನ್ನೊಂದಿಗೆ 70 ಶಾಸಕರಿದ್ದಾರೆ. ಹೋರಾಟ ಮನೋಭಾವದ ವ್ಯಕ್ತಿಯನ್ನು ಜನ ಯಾವಾಗಲೂ ಬೆಂಬಲಿಸುತ್ತಾರೆ. ಎಲ್ಲ ಸಮುದಾಯಗಳ ಮುಖಂಡರು ನನ್ನನ್ನು ಸನ್ಮಾನಿಸುವ ಆಶಯ ವ್ಯಕ್ತಪಡಿಸುತ್ತಾರೆ. ನಾನು ಮಂಡಿಸಿದ 6 ಬಜೆಟ್‌ಗಳಲ್ಲಿ ಯಾವ ಸಮುದಾಯಕ್ಕೂ ಮೋಸ ಮಾಡಿಲ್ಲ. ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಿದ್ದೇನೆ' ಎಂದರು.

ಪಾಕಿಸ್ತಾನದಲ್ಲಿ ತಪ್ಪು ಮಾಡಿದರೆ: 'ನಾನು ಈಗ ಅನುಭವಿಸುತ್ತಿರುವ ಮಾನಸಿಕ ವೇದನೆಯ ಸ್ಥಿತಿಯಲ್ಲಿ ಈ ಸಮಾರಂಭಕ್ಕೆ ಬರುವ ಹಾಗೆ ಇರಲಿಲ್ಲ. ಪಾಕಿಸ್ತಾನದಲ್ಲಿ ತಪ್ಪು ಮಾಡಿದವರನ್ನೂ ಜೈಲಿಗೆ ಕಳಿಸುವುದಿಲ್ಲ. ಆದರೆ, ಇಲ್ಲಿ ಯಾವ ತಪ್ಪೂ ಮಾಡದ ನಾನು ಜೈಲಿಗೆ ಹೋಗಬೇಕಾಯಿತು' ಎಂದವರು ನೊಂದು ನುಡಿದರು.

'ಯಡಿಯೂರಪ್ಪ ದೊಡ್ಡ ಆಲದ ಮರವಿದ್ದಂತೆ. ಕೆಲವರು ಈ ಮರಕ್ಕೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಈ ಮರದ ಆಶ್ರಯ ಪಡೆಯುತ್ತಿದ್ದಾರೆ. ಅವರವರು ಮಾಡಿದುದನ್ನು ಅವರು ಉಣ್ಣುತ್ತಾರೆ ಎಂದು ಮಾರ್ಮಿಕವಾಗಿ ನುಡಿದ ಅವರು, ತಾನು ಮತ್ತೆ ದಿಲ್ಲಿಗೆ ಅಧಿಕಾರದ ಭಿಕ್ಷೆ ಬೇಡಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮಾವೇಶದಲ್ಲಿ ಸಚಿವ ವಿ. ಸೋಮಣ್ಣ, ಶಾಸಕ ದೊಡ್ಡಣ್ಣ ಗೌಡ, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಎನ್‌. ಶಂಕರಪ್ಪ, ಸವಿತಾ ಸಮಾಜ ರಾಜ್ಯಾಧ್ಯಕ್ಷ ಎನ್‌. ಸಂಪತ್‌ ಕುಮಾರ್‌, ಉಪ ಮೇಯರ್‌ ಎಸ್‌. ಹರೀಶ್‌, ಅಹಿಂದದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ ಮುಂತಾದವರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+