ಕುಮಾರಸ್ವಾಮಿ ಜಾಮೀನು ಏ.20ಕ್ಕೆ ವಿಚಾರಣೆ

ಥಣಿಸಂದ್ರ ಗ್ರಾಮದಲ್ಲಿನ 3.08 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ 2007ರಲ್ಲಿ ಕೈಬಿಟ್ಟ ಪ್ರಕರಣದಲ್ಲಿ ಕುಮಾರಸ್ವಾಮಿಯನ್ನು ಆರೋಪಿಯನ್ನಾಗಿಸಿ ಲೋಕಾಯುಕ್ತ ಪೊಲೀಸರು ಸೋಮವಾರ ಚಾರ್ಜ್ ಷೀಟ್ ಸಲ್ಲಿಸಿದ್ದರು.
ಪ್ರಕರಣದ ಸಂಬಂಧ ವಿವರ ನೀಡುವಂತೆ ನ್ಯಾ ಕೆಎನ್ ಕೇಶವನಾರಾಯಣ ನೇತೃತ್ವದ ನ್ಯಾಯಪೀಠ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ. ಜತೆಗೆ ಆಕ್ಷೇಪಣೆ ಸಲ್ಲಿಸುವಂತೆಯೂ ಲೋಕಾಯುಕ್ತ ಪೊಲೀಸ್ ಪರ ವಕೀಲರಿಗೆ ನ್ಯಾಯಪೀಠ ಸೂಚಿಸಿದೆ.
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಮನ್ಸ್ ನೀಡಬೇಕೇ? ಬೇಡವೇ? ಎಂಬುದನ್ನು ಲೋಕಾಯುಕ್ತ ಕೋರ್ಟ್ ಏ. 21ರಂದು ನಿರ್ಧರಿಸಲಿದೆ. ಅಲ್ಲಿಯವರೆಗೆ ಕುಮಾರಸ್ವಾಮಿ ನಿರಾಳ. ಹಾಗೆಂದೇ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಬರ ಅಧ್ಯಯನ ಪ್ರವಾಸಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೊರಟುನಿಂತಿದ್ದಾರೆ.












Click it and Unblock the Notifications