ಆರ್ಬಿಐನಿಂದ ರೆಪೋ ದರ ಕಡಿತ : ಇಳಿಯಲಿವೆ ಸಾಲ

RBI cuts repo rates
ಮುಂಬೈ, ಏ. 17 : ಮನೆ, ವಾಹನ ಸಾಲ ಪಡೆದಿರುವವರಿಗೆ ಅಥವಾ ಪಡೆಯಲು ಯೋಜನೆ ಹೂಡುತ್ತಿರುವವರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂರು ವರ್ಷಗಳ ನಂತರ ಸಣ್ಣ ಸಾಲ ಯೋಜನೆಗಳ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್‌ನಷ್ಟು ಕಡಿತಗೊಳಿಸಿದೆ.

ಕೇವಲ 25 ಬೇಸಿಸ್ ಪಾಯಿಂಟ್‌ನಷ್ಟು ಕಡಿತವನ್ನು ನಿರೀಕ್ಷಿಸುತ್ತಿದ್ದ ಹಣಕಾಸು ಸಂಸ್ಥೆಗಳಿಗೆ ಈ ಕೊಡಗೆ ಬಂಪರ್ ಕೊಡುಗೆಯಂತಾಗಿದೆ. ಸತತ 13 ಬಾರಿ ಏರಿಕೆ ಕಂಡನಂತರ ಮೊದಲ ಬಾರಿಗೆ ರೆಪೋ ದರವನ್ನು ಇಳಿಸಲಾಗಿದೆ. ರೆಪೋ ದರ ಅಂದರೆ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಬಡ್ಡಿದರ. [ರೆಪೋ ಮತ್ತು ರಿವರ್ಸ್ ರೆಪೋ]

ಮನೆ, ವಾಹನ ಸಾಲ ಪಡೆದು ಪ್ರತಿ ತಿಂಗಳು ಇಎಮ್‌ಐ ಕಟ್ಟುತ್ತಿರುವವರಿಗೆ ಈ ದರ ಕಡಿತ ಸಾಕಷ್ಟು ನೆಮ್ಮದಿ ತರಲಿದೆ. ವಾಹನ ಮಾರಾಟದ ಮೇಲೆಯೂ ಈ ದರ ಕಡಿತ ಸಕಾರಾತ್ಮಕ ಪರಿಣಾಮ ಬೀರಲಿದೆ. ಕುಸಿಯುತ್ತಿರುವ ದೇಶದ ಆರ್ಥಿಕ ಸ್ಥಿತಿಯನ್ನು ಪುನರುಜ್ಜೀವನಗೊಳಿಸಲು ಈ ದರ ಕಡಿತ ತೀರ ಅಗತ್ಯವಿತ್ತು. ಹಣದುಬ್ಬರವನ್ನು ತಹಬದಿಗೆ ತರುವ ಉದ್ದೇಶದಿಂದ ಕಳೆದ ಮೂರು ವರ್ಷಗಳಲ್ಲಿ ರೆಪೋ ದರವನ್ನು ಆರ್‌ಬಿಐ ಏರಿಸುತ್ತಲೇ ಇತ್ತು.

ಆದರೆ, ಈ ದರ ಕಡಿತ ಹಣದುಬ್ಬರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಪಂಡಿತರು ಅಂದಾಜಿಸಿದ್ದಾರೆ. ಕಚ್ಚಾ ತೈಲದ ಬೆಲೆ ಕಳೆದ ಕೆಲ ತಿಂಗಳುಗಳಿಂದ ಏರುತ್ತಲೇ ಇದೆ. ತೈಲ ಉತ್ಪನ್ನಗಳ ಬೆಲೆ ಏರಿಸಲು ಸಾಕಷ್ಟು ಒತ್ತಡ ಸರಕಾರದ ಮೇಲಿದೆ. ಪೆಟ್ರೋಲ್ ದರ ಈಗ ಏರಿಕೆಯಾದರೆ ಇದು ಹಣದುಬ್ಬರದ ಮೇಲೆ ನೇರವಾಗಿ ಹೊಡೆದ ಹಾಕಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+