• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಕೀಯ: ಚೀನಾದಲ್ಲಿ 42 ವೆಬ್‌ಸೈಟ್‌ಗಳಿಗೆ ಗುನ್ನಾ

By Srinath
|
ಬೀಜಿಂಗ್, ಏ.17‌: ಜಗತ್ತಿನಲ್ಲೇ ಅತಿ ಹೆಚ್ಚು ಆನ್‌ಲೈನ್‌ ಬಳಕೆದಾರರನ್ನು ಹೊಂದಿರುವ ಚೀನಾದಲ್ಲಿ ಈ ಹಿಂದಿನಂತೆ ರಾಜಕೀಯ ಸೆನ್ಸಾರ್ ಷಿಪ್ ತಾಂಡವವಾಡುತ್ತಿದೆ. ರಾಜಕೀಯವಾಗಿ ಬೀಜಿಂಗಿನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬಂತಹ ಅಭಿಪ್ರಾಯಗಳನ್ನು ಅಲ್ಲಿನ ವೆಬ್‌ಸೈಟ್‌ಗಳು ಹರಡುತ್ತಿವೆ. ಇದು ದೇಶದಲ್ಲಿ ರಾಜಕೀಯ ಸುಳಿಗಾಳಿಗೆ ಕಾರಣವಾಗಿದೆ.

ಆದ್ದರಿಂದ ಇಂತಹ ಆನ್‌ಲೈನ್‌ ವದಂತಿಗಳಿಗೆ ಕಡಿವಾಣ ಹಾಕಲು ಚೀನಾ ಆಡಳಿತ, ಕಳೆದೊಂದು ತಿಂಗಳಲ್ಲಿ 42 websiteಗಳನ್ನು ಕಿತ್ತುಹಾಕಿದೆ. ಜತೆಗೆ, 2 ಲಕ್ಷಕ್ಕೂ ಅಧಿಕ ಹೇಳಿಕೆಗಳನ್ನು delete ಮಾಡಿದೆ ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಜಕೀಯ ಅಸ್ಥಿರತೆ ತಲೆದೋರುವ ಭೀತಿ ಎದುರಾಗಿರುವುದರಿಂದ ಚೀನಾದ ಅಧಿಕಾರಿಗಳು ಸೂಕ್ಷ್ಮ ಮಾಹಿತಿಗಳನ್ನು ಸೆನ್ಸಾರ್‌ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಿಂದಿನ ತಿಂಗಳು ರಾಜಕೀಯ ನಾಯಕರನ್ನು ಟೀಕಿಸಿ, ಅಸಂಗತ ರಾಜಕೀಯ ಅಭಿಪ್ರಾಯಗಳನ್ನು ಪ್ರಕಟಿಸಿದ್ದಕ್ಕೆ ಈ ವೆಬ್‌ಸೈಟ್‌ಗಳನ್ನು ಮುಚ್ಚಲಾಗಿದೆ. ಸೇನಾ ದಂಗೆಯ ವದಂತಿಗಳನ್ನು ಮಟ್ಟ ಹಾಕುವ ಸಲುವಾಗಿಯೂ ಸರಕಾರ ವೆಬ್‌ಸೈಟ್‌ಗಳ ವಿರುದ್ಧ ಈ ಕಠಿಣ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಉನ್ನತ ರಾಜಕೀಯ ನಾಯಕರೊಬ್ಬರು ಮರಳಿ ಮುಖ್ಯವಾಹಿನಿಗೆ ಬರಲು ಯತ್ನಿಸುತ್ತಿರುವ ವದಂತಿಗಳಿಗೆ ಕಡಿವಾಣ ಹಾಕುವ ಸಲುವಾಗಿ ಚೀನಾದ ಅಧಿಕಾರಿಗಳು ಒಂದೇ ಸಮನೆ ವೆಬ್‌ಸೈಟ್‌ಗಳನ್ನು ಕಿತ್ತು ಹಾಕಿದ್ದಾರೆ. ಹೇಳಿಕೆಗಳನ್ನು ಅಳಿಸಿ ಹಾಕಿದ್ದಾರೆ ಎಂದು ಸರಕಾರಿ ಸುದ್ದಿಸಂಸ್ಥೆ ಕ್ಸಿನ್‌ಹುವಾ ಮೂರು ಸಾಲಿನ ಹೇಳಿಕೆಯಲ್ಲಿ ತಿಳಿಸಿದೆ. ಈ ರಾಜಕೀಯ ನಾಯಕನ ಪತ್ನಿ ಬ್ರಿಟಿಷ್‌ ಉದ್ಯಮಿಯೊಬ್ಬರನ್ನು ಸಾಯಿಸಿದ್ದಾರೆ ಎಂಬ ಆರೋಪವಿದೆ. ಆದ್ದರಿಂದ ಅವರನ್ನು ಹುದ್ದೆಯಿಂದ ಕಿತ್ತು ಹಾಕಲಾಗಿದೆ.

ಇದು ಕಮ್ಯುನಿಸ್ಟ್‌ ಪಾರ್ಟಿಯ ಕಾರ್ಯದರ್ಶಿ ಹುದ್ದೆಯಿಂದ ಕಳೆದ ತಿಂಗಳು ಉಚ್ಚಾಟಿತರಾಗಿರುವ ಜನಪ್ರಿಯ ನಾಯಕ ಬೊ ಕ್ಸಿಲಾಯಿ ಕುರಿತು ಈ ಹೇಳಿಕೆ ಎಂದು ಮೂಲಗಳು ಹೇಳಿವೆ. ಚೀನಾದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿರುವ ಟ್ವಿಟ್ಟರ್‌ ಮಾದರಿಯ ಬ್ಲಾಗಿಂಗ್‌ ಸೈಟ್‌ ವಿಬೊಸ್‌ (webOS), 25 ಸದಸ್ಯರ ಪಾಲಿಟ್‌ ಬ್ಯೂರೊದಿಂದ ಬೊ ಕ್ಸಿಲಾಯಿ ಅವರನ್ನು ಅಮಾನತುಗೊಳಿಸಿರುವುದು ಹಾಗೂ ಅವರ ಪತ್ನಿಯ ವಿರುದ್ಧ ಕೊಲೆ ತನಿಖೆ ನಡೆಯುತ್ತಿರುವುದರ ಬಗ್ಗೆ ಅನೇಕ ವದಂತಿಗಳನ್ನು ಪ್ರಕಟಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಚೀನಾ ಸುದ್ದಿಗಳುView All

English summary
China political turmoil 42 websites shut-down. Chinese authorities have removed more than 210,000 online posts and shut down 42 websites since mid-March in their latest crackdown on Internet-based rumors, a senior official said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more