ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್, ಆದರೆ...

By Mahesh
|
Google Oneindia Kannada News

CM DV Sadananda Gowda and Nitin Gadkari
ನವದೆಹಲಿ, ಏ.16: ಸಿಎಂ ಸದಾನಂದ ಗೌಡರ ಖಾತೆ ಹಂಚಿಕೆ ಅನಿವಾರ್ಯ ಎಂದು ಹೈಕಮಾಂಡ್‌ ನಿರ್ಧರಿಸಿ, ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಸಾರ್ ನನ್ನ ತಲೆ ಮೇಲೆ ಸುಮಾರು 20ಕ್ಕೂ ಹೆಚ್ಚು ಖಾತೆಗಳ ಹೊರೆ ಇದೆ. ದಯವಿಟ್ಟು ಆದಷ್ಟು ಬೇಗ ಇಳಿಸಲು ಅವಕಾಶ ಕಲ್ಪಿಸಿ ಎಂದು ಡಿವಿ ಸದಾನಂದ ಗೌಡರು ಹೈಕಮಾಂಡ್ ಮುಂದೆ ಅಂಗಲಾಚಿದರೂ ಗಡ್ಕರಿ ಕ್ಯಾರೆ ಎನ್ನದೆ ನಾಗಪುರಕ್ಕೆ ತೆರಳಿದ್ದಾರೆ.

ಸಚಿವಕಾಂಕ್ಷಿ ಶಾಸಕರ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ದೆಹಲಿಗೆ ತೆರಳಿದ ಸದಾನಂದ ಗೌಡರಿಗೆ ಅರ್ಧ ಜಯ ಮಾತ್ರ ಸಿಕ್ಕಿದೆ. ಸಂಪುಟ ವಿಸ್ತರಣೆಗೆ ಓಕೆ ಎಂದಿರುವ ಹೈಕಮಾಂಡ್, ದಿನಾಂಕ ನಿಗದಿ ಮಾತ್ರ ಯಡಿಯೂರಪ್ಪ ಕೋರ್ಟ್ ಭವಿಷ್ಯ ನಿರ್ಧಾರದ ನಂತರ ಎಂದು ಹೇಳಿದೆ.

ಏ.20ರಂದು ಸಿಇಸಿ ವರದಿ ಆಧಾರದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಪಗಳ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ. ತೀರ್ಪು ಬಂದ ನಂತರ ನಿಮ್ಮ ಸಂಪುಟ ವಿಸ್ತರಿಸಿ, ಸುಮ್ಮನೆ ಬಿಕ್ಕಟ್ಟು ಉಲ್ಬಣಕ್ಕೆ ಕಾರಣರಾಗಬೇಡಿ ಎಂದು ಗಡ್ಕರಿ ಅವರು ಸದಾನಂದ ಗೌಡರಿಗೆ ಸಲಹೆ ನೀಡಿದ್ದಾರೆ.

ಒಂದು ಗಂಟೆ ಚರ್ಚೆ: ನಾಗಪುರಕ್ಕೆ ತೆರಳುವ ಅವಸರದಲ್ಲಿದ್ದ ಗಡ್ಕರಿ ಅವರು ಸದಾನಂದ ಗೌಡರ ಜೊತೆ ಒಂದು ಗಂಟೆ ಕಾಲ ಚರ್ಚಿಸಿದರು. ಕೋರ್ಟ್ ತೀರ್ಪಿಗೂ ಮುನ್ನ ಸಂಪುಟ ವಿಸ್ತರಿಸಿ ಕುರ್ಚಿಭದ್ರಪಡಿಸಿಕೊಳ್ಳುವ ಸಿಎಂ ಸದಾನಂದ ಗೌಡರ ಯೋಜನೆಗೆ ಬ್ರೇಕ್ ಹಾಕಿದ ಗಡ್ಕರಿ, ಯಡಿಯೂರಪ್ಪ ಅವರನ್ನು ತೆಗೆದು ಹಾಕುವಂತಿಲ್ಲ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಿ ಎಂದು ಹೇಳಿ ಬಿಟ್ಟಿದ್ದಾರೆ.

English summary
BJP high command said okay to CM sadananda Gowda's much awaited cabinet expansion but twist. BJP is observing SC verdict on Yeddyurappa's illegal mining case and later cabinet expansion can take place said Gadkari. List of aspirants for cabinet berth is more than 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X