ನಿರ್ಮಲ್ ಬಾಬಾ ಅಕೌಂಟ್ ನಲ್ಲಿ 109 ಕೋಟಿ

ಕಳೆದ ಮೂರು ತಿಂಗಳಿನಲ್ಲಿ ಬಾಬಾ ಅವರ ಮೂರು ಅಕೌಂಟ್ ಗಳಿಗೆ ಜಮೆಯಾಗಿರುವ 109 ಕೋಟಿ ರು ಬಗ್ಗೆ ಐಟಿ ಇಲಾಖೆ ಪ್ರಶ್ನಿಸಲು ನಿರ್ಧರಿಸಿದೆ.
ಜಾರ್ಖಂಡ್ ದಿನಪತ್ರಿಕೆ ಪ್ರಭಾತ್ ಖಬರ್ ಹೊರಗೆಳೆದಿರುವ ಸತ್ಯಗಳು ಬೆಚ್ಚಿಬೀಳಿಸುವಂತಿದೆ. ಬಾಬಾ ಸಂದರ್ಶಕರು ತಮ್ಮ ಸಂಬಳದ ಶೇ 10 ರಷ್ಟು ಬಾಬಾ ಕಾಲಿಗೆ ಸುರಿಯಬೇಕೆಂಬುದು ಮೊದಲ ನಿಯಮ ಎನ್ನಲಾಗಿದೆ.
ಭಕ್ತರ ದುಡ್ಡಿನಲ್ಲಿ ಸ್ಟಾರ್ ಹೋಟೆಲ್ ಖರೀದಿಸಿರುವುದು. 1.80 ಕೋಟಿ ಬೆಲೆ ಬಾಳುವ ಫ್ಲ್ಯಾಟ್ ಪಡೆದಿರುವುದು. ಸ್ಟಾರ್ ಹೋಟೆಲ್ ಸುಮಾರು 30 ಕೋಟಿ ಮೌಲ್ಯದ ಡೀಲ್ ಎನ್ನಲಾಗಿದೆ. ಭಕ್ತರಿಂದ ಹಣ ಪಡೆದ ನಂತರ ದೇಶದಾದ್ಯಂತ ಇರುವ ತನ್ನ ಖಾತೆಗಳಿಗೆ ಹಣ ಸಂದಾಯ ಮಾಡುವುದು ಬಾಬಾನ ವಾಡಿಕೆ ಎಂದು ತಿಳಿದು ಬಂದಿದೆ.












Click it and Unblock the Notifications