ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಸಾಲ: ಆ ರ್ ಬಿಐ ಏನು ಹೇಳುತ್ತದೆ?

By Srinath
|
Google Oneindia Kannada News

gold-loan-rbi-rules-nbfc-karnataka
ಬೆಂಗಳೂರು, ಏ.14: ಚಿನ್ನಾಭರಣಗಳನ್ನು ಅಡ ಇಟ್ಟುಕೊಂಡು ಗ್ರಾಹಕರಿಂದ ನಿಯಮ ಬಾಹಿರವಾಗಿ ಹೆಚ್ಚು ಬಡ್ಡಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಹಾಗೈ ಅದರ ಜತೆಜತೆಗೆ ಅಂಥ ಕಂಪನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ವಿಭಾಗೀಯ ಪೀಠ ಶುಕ್ರವಾರ ಖಡಕ್ ಆದೇಶ ನೀಡಿದೆ.

ಗಮನಾರ್ಹವೆಂದರೆ ಮಾರ್ಚ್ ಅಂತ್ಯದಲ್ಲಿ ಈ ದುಬಾರಿ ಚಿನ್ನದ ಸಾಲಕ್ಕೆ ಕತ್ತರಿ ಹಾಕುವ ನಿಟ್ಟಿನಲ್ಲಿ ಆರ್ ಬಿಐ ಚಿನ್ನದ ಅಡಮಾನ ಸಾಲದ ಬಗ್ಗೆ ಒಂದಷ್ಟು ಬಿಗಿ ಕ್ರಮ ಕೈಗೊಂಡಿದೆ. ಇದರಿಂದ ಚಿನ್ನ ಅಡ ಇಟ್ಟು ಹೆಚ್ಚು ಸಾಲ ಪಡೆಯುವ ಸುವರ್ಣಾವಕಾಶಕ್ಕೆ ಕತ್ತರಿ ಬಿದ್ದಿದೆಯಾದರೂ ಸಾಲಗಾರರನ್ನು ರಕ್ಷಿಸಲಾಗಿದೆ.

ವಿಷಯ ಏನಪಾ ಅಂದರೆ ಮೊದಲನೆಯದಾಗಿ ಚಿನ್ನದ ಒಟ್ಟು ಮೌಲ್ಯದ ಶೇ 60ಕ್ಕಿಂತ ಹೆಚ್ಚಿನ ಹಣವನ್ನು ಸಾಲವಾಗಿ ನೀಡಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಕಳೆದ ವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಂತಹ ಸಾಲದ ವಹಿವಾಟು ಇತ್ತೀಚೆಗೆ ನಾಗಾಲೋಟದಲ್ಲಿ ಶೇ. 50ರಷ್ಟು ವಾರ್ಷಿಕ ವೃದ್ಧಿ ಸಾಧಿಸಿವೆ. ಜತೆಗೆ, ಇವು ಚಿನ್ನದ ಮೌಲ್ಯ ಶೇ. 80 ಕ್ಕಿಂತ ಹೆಚ್ಚು ಮೊತ್ತದ ಸಾಲವನ್ನು ನೀಡುತ್ತಿವೆ.

ಎಲ್ಲಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಶೇ 60ರಷ್ಟು ಚಿನ್ನದ ಸಾಲ-ಮೌಲ್ಯ ಅನುಪಾತ (ಎಲ್‌ಟಿವಿ) ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಚಿನ್ನಾಭರಣಗಳಿಗೆ ನೀಡುವ ಸಾಲವು, ಆಭರಣಗಳ ಒಟ್ಟು ಮೌಲ್ಯದ ಶೇ 60ನ್ನು ಮೀರಬಾರದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಲವು ಎನ್‌ಬಿಎಫ್‌ಸಿಗಳು ಚಿನ್ನದ ಮೇಲೆ ಗರಿಷ್ಠ ಸಾಲ ನೀಡುತ್ತಿವೆ ಹಾಗೂ ಹೆಚ್ಚಿನ ಬಡ್ಡಿ ದರ, ದಂಡ ವಸೂಲಿ ಮಾಡುತ್ತಿವೆ. ಇದನ್ನು ನಿಯಂತ್ರಿಸಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಚಿನ್ನದ ಮೇಲೆ ಸಾಲ ನೀಡುವ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಹಾಗೂ ಇಂತಹ ಸಂಸ್ಥೆಗಳಲ್ಲಿ ಭೌತಿಕ ರೂಪದಲ್ಲಿರುವ ಚಿನ್ನದ ಸಂಪತ್ತು ಹೆಚ್ಚಳವಾಗುತ್ತಿದೆ. ಸಂಸ್ಥೆಗಳು ತಮ್ಮ ವಹಿವಾಟು ವಿಸ್ತರಿಸಲು ಸಾರ್ವಜನಿಕರಿಂದ ಮತ್ತು ಬ್ಯಾಂಕುಗಳಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳ ನೆರವು ಪಡೆದುಕೊಳ್ಳುತ್ತಿವೆ. ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ಈ ವಹಿವಾಟು ನಿಯಂತ್ರಿಸಲು ಇಂತಹ ಇಂತಹ ಬಿಗಿ ನೀತಿಯ ಅಗತ್ಯ ಇದೆ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಎನ್‌ಬಿಎಫ್‌ಸಿಗಳು ವಾರಸುದಾರರಿಗೆ ಚಿನ್ನವನ್ನು ಮರಳಿಸುವಾಗ ಅದರ ಗುಣಮಟ್ಟ ಪರೀಕ್ಷಿಸಿ, ಖಾತರಿಗೊಳಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲು ಆರ್‌ಬಿಐ ಚಿಂತಿಸುತ್ತಿದೆ.

English summary
The Reserve Bank of India rules on Gold loan highlights that non banking finance companies sholdn't lend more than 60% of the value of gold jewellery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X