ಅತಿ ಶ್ರೀಮಂತ ರಸ್ತೆ ಯಾವುದು, ಮೌಲ್ಯವೆಷ್ಟು?

ದೊರೆ ಔರಂಗಜೇಬನ ಅಳಿದುಳಿದ ಸಂಪತ್ತು ಇಲ್ಲಿದ್ದು, ಅದರಿಂದ ಶ್ರೀಮಂತವಾಗಿರಬಹುದಾ? ಗೊತ್ತಿಲ್ಲ. ಆದರೆ, ಈ ರಸ್ತೆಯನ್ನು ಇಂದು ಇಷ್ಟೊಂದು ಶ್ರೀಮಂತಗೊಳಿಸಿರುವ ಕನಿಷ್ಠ ಏಳು ಲಕ್ಷ್ಮೀ ಪುತ್ರರು ಇಲ್ಲಿ ವಾಸವಾಗಿದ್ದಾರೆ. ಅವರಲ್ಲೊಬ್ಬರು ಬ್ರಿಟನ್ನಿನ ಅತ್ಯಧಿಕ ಕರೋಡ್ ಪತಿ, 'ಆಧುನಿಕ ಉಕ್ಕಿನ ಮನುಷ್ಯ', ಆಗರ್ಭ ಶ್ರೀಮಂತ ಲಕ್ಷ್ಮಿ ಮಿತ್ತಲ್. ಅವರ ಭವ್ಯ ಬಂಗಲೆ ಇದೇ ರಸ್ತೆಯಲ್ಲಿದೆ.
ಈ ರಸ್ತೆಯಲ್ಲಿ ಚದರಡಿ ಭೂಮಿಯ ಬೆಲೆ ಕೇವಲ 17,000 ಪೌಂಡ್. ಅದೇ ಬ್ರಿಟನ್ನಿನಲ್ಲಿ ಕೆನ್ಸಿಂಗ್ ಟನ್ ಎಂಬ ಅತ್ಯಂತ ಶ್ರೀಮಂತ ಬಡಾವಣೆಯಿದೆ. ಅಲ್ಲಿರುವ ಚದರಡಿ ಬೆಲೆ ಭೂಮಿಗಿಂತ ಇದು 14 ಪಟ್ಟು ಹೆಚ್ಚು! ಸಮೀಪದಲ್ಲೇ ಖ್ಯಾತ ಲೋಧಿ ಗಾರ್ಡನ್ಸ್ ಇದೆ. ಇಲ್ಲಿ ರಿಯಲ್ ಎಸ್ಟೇಟ್ ಬೆಲೆ ಚದರಡಿಗೆ 12 ದಶಲಕ್ಷ ಪೌಂಡ್.
ಇಲ್ಲಿರುವ ಇತರೆ ಶ್ರೀಮಂತರೆಂದರೆ ಭಾರಿ ರಿಯಲ್ ಎಸ್ಟೇಟ್ ಕುಳ ಕುಶಾಲ್ ಪಾಲ್ ಸಿಂಗ್. ಈತ ಅಂದಾಜು 4.6 ಶತಕೋಟಿ ಪೌಂಡ್ ಬೆಲೆಬಾಳುತ್ತಾನೆ. ಪ್ರತಿಷ್ಠಿತ ಆಸ್ಪತ್ರೆಗಳ ಒಡೆಯ ಅನಲ್ಜಿತ್ ಸಿಂಗ್ ಸಹ ಇದೇ ರಸ್ತೆಯಲ್ಲಿ ವಾಸವಾಗಿರುವುದು. ಈ ನಿವಾಸಗಳನ್ನು ಕಾಯುತ್ತಿರುವುದು ಅತ್ಯಾಧುನಿಕ ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆಗಳು. ಇದರ ವೆಚ್ಚವೇ ಕೋಟ್ಯಂತರ.
ಇನ್ನು, ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬೈನಲ್ಲೂ ಇಂತಹ ಒಂದು ರಸ್ತೆಯಿದೆ. ಅದರ ಹೆಸರು ಆಲ್ಟಾಮೌಂಟ್ ರೋಡ್ ಅಂತ. ಆ ರಸ್ತೆ ಮೇಲಿನ ಸಂಪತ್ತು 20 ಶತಕೋಟಿ ಪೌಂಡ್ ಇರಬಹುದು ಅಷ್ಟೆ. ನಮ್ಮ ರಾಜಧಾನಿ ಬೆಂಗಳೂರಿನ ಶ್ರೀಮಂತ ರಸ್ತೆ ಯಾವುದು ನೀವೇ ಹೇಳಿ.












Click it and Unblock the Notifications