ಸಂವಿಧಾನ ಕರ್ತೃ ಅಂಬೇಡ್ಕರ್ ಗೆ ನೊಬೆಲ್ ನೀಡಿ

ಭಾರತದ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಎಲ್ಲರಿಗೂ ಸಮಾನತೆ ತಂದುಕೊಟ್ಟು ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಅಂಬೇಡ್ಕರ್ ಸೇವೆ ಸಲ್ಲಿಸಿದ್ದಾರೆ.
ಅಮೆರಿಕದ ಆಕ್ಸ್ ಫರ್ಡ್ ಯೂನಿವರ್ಸಿಟಿ ಹೊರತಂದಿರುವ ದ ಮೇಕರ್ಸ್ ಆಫ್ ಯೂನಿರ್ವಸ್ ಎಂಬ ಪುಸ್ತಕದಲ್ಲಿ 10 ಸಾವಿರ ವರ್ಷಗಳಿಂದ ವಿಶ್ವಾದಾದ್ಯಂತ ಗಣನೀಯ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ವ್ಯಕ್ತಿ ಚಿತ್ರಗಳನ್ನು ದಾಖಲಿಸಿದೆ.
ಅದರಲ್ಲಿ ಅಂಬೇಡ್ಕರ್ ಅವರ ಮಾಹಿತಿಯೂ ಇರುವುದು ಹೆಮ್ಮೆಯ ವಿಷಯ. ಇಂಥ ವಿಶಿಷ್ಟ ಗೌರವಕ್ಕೆ ಪಾತ್ರವಾಗಿರುವ ಅಂಬೇಡ್ಕರ್ ಅವರಿಗೆ ಹೆಚ್ಚಿನ ಮಾನ್ಯತೆ ಸಿಗಬೇಕಿದೆ ಎಂದು ಮುನಿಅಂಜನಪ್ಪ ಹೇಳಿದ್ದಾರೆ.
ಚಿಕ್ಕಜಾಲ ಹಾಗೂ ಸಾಗೇನಹಳ್ಳಿಯಲ್ಲಿ ಏ.14ರಂದು ಅಂಬೇಡ್ಕರ್ ಜಯಂತಿ ಆಚರಣೆಗೆ ಸಿದ್ಧತೆ ನಡೆದಿದೆ. ಮಾಜಿ ಶಾಸಕ ವಿ ಕೃಷ್ಣಪ್ಪ, ಹಾಲಿ ಶಾಸಕ ವಿಶ್ವನಾಥ್, ಮೇಯರ್ ಶಾರದಮ್ಮ, ಶಾಸಕ ಕೃಷ್ಣಭೈರೇಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಅಂಜನಪ್ಪ ಹೇಳಿದರು.












Click it and Unblock the Notifications