ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರ್ ಕಂಪನ, 1 ಗಂಟೆಗೆ 45 ಲಕ್ಷ ಕರೆ!

By Mahesh
|
Google Oneindia Kannada News

Bangalore alert calls
ಬೆಂಗಳೂರು, ಏ.12: ಬುಧವಾರ (ಏ.11) ಮಟ ಮಟ ಮಧ್ಯಾಹ್ನ ದೇಶದ ಸಿಲಿಕಾನ್ ಸಿಟಿ, ಐಟಿ ಸಿಟಿ ಎನಿಸಿರುವ ಬೆಂಗಳೂರಿನಲ್ಲಿ ಕಂಪನವೋ ಕಂಪನ. ಭೂಕಂಪದ ಪರಿಣಾಮಕ್ಕಿಂತ ಬೆಂಗಳೂರಿನಲ್ಲಿ ಟೆಲಿಕಾಂ ಇಲಾಖೆಯಲ್ಲಿ ಕಂಪನವೋ ಕಂಪನವಾಗಿತ್ತು.

ಬಹುತೇಕ ಕಂಪನಿಗಳು ಅವಧಿಗೆ ಮುನ್ನ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಿಬಿಟ್ಟಿತು. ಭೂಕಂಪದ ಸುದ್ದಿ ಖಾಸಗಿ ಮಾಧ್ಯಮಗಳ ಹರಡುತ್ತಿದ್ದಂತೆ ಫೋನ್ ಕರೆಗಳ ಕಂಪನ ಶುರುವಾಗೇ ಬಿಟ್ಟಿತು. ಮೊದಲ ಒಂದು ಗಂಟೆಯಲ್ಲಿ ಸುಮಾರು 45 ಲಕ್ಷ ಫೋನ್ ಕರೆಗಳು ಅದಲು ಬದಲಾಗಿದೆ ಎಂದು ಟೆಲಿಅಕಾಂ ಇಅಲಕೆ ಮಾಹಿತಿ ನೀಡಿದೆ.

ಬಹುಶಃ ಇಡೀ ದೇಶದಲ್ಲಿ ಈ ಪರಿ ಗಾಬರಿಗೊಳಗಾದ, ತಮ್ಮವರ ಬಗ್ಗೆ ಕಾಳಜಿ ತೋರಿಸಿದ ನಗರ ಮತ್ತೊಂದಿಲ್ಲ.

ಸುಮಾರು 9 ಮೊಬೈಲ್ ಕಂಪನಿಗಳು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಕಂಪನಿಗಳ ಗ್ರಾಹಕರನ್ನು ಸೇರಿಸಿದರೆ ಸುಮಾರು 4.5 ಕೋಟಿ ಕರೆಗಳು ದಾಖಲಾಗುತ್ತದೆ.

ಆದರೆ, ಬುಧವಾರದಂದು ಪ್ರತಿ ಕಂಪನಿಗಳು 5 ಲಕ್ಷಕ್ಕೂ ಅಧಿಕ ಕರೆಗಳನ್ನು ದಾಖಲಿಸಿಕೊಂಡಿದೆ. ಪ್ರತಿಗಂಟೆಗೆ 45 ಲಕ್ಷ ಫೋನ್ ಕರೆಗಳು ಸ್ವೀಕರಿಸಲಾಗಿದೆ. ಎಲ್ಲಾ ಕರೆಗಳು 2 ಗಂಟೆ ಇಂದ 3 ಗಂಟೆ ಅವಧಿಯಲ್ಲಿ ಈ ಕರೆಗಳು ದಾಖಲಾಗಿದೆ ಎಂದು ಬಿಎಸ್ ಎನ್ ಎಲ್ ಹೇಳಿದೆ.

'ಕೆಲವು ಸಾರ್ವಜನಿಕರಿಂದ ನಮ್ಮ ಸಹಾಯವಾಣಿಗೂ ಕರೆಗಳು ಬಂದಿದ್ದವು. ಆದರೆ, ಟಿವಿ ಮಾಧ್ಯಮಗಳಲ್ಲಿ ಭೂಕಂಪದ ಸಂದರ್ಭದ ಬಗ್ಗೆ ಅನುಸರಿಸಬಹುದಾದ ಮುನ್ನೆಚ್ಚರಿಕೆ ಬಗ್ಗೆ ವಿವರವಾಗಿ ಸುದ್ದಿ ಪ್ರಸಾರವಾದ ಮೇಲೆ ಕರೆಗಳು ಬರುವುದು ಕಮ್ಮಿಯಾಯಿತು' ಎಂದು ಅಗ್ನಿಶಾಮಕ ದಳದ ನಿರ್ದೇಶಕ ಬಿಜಿ ಚೆಂಗಪ್ಪ ಹೇಳಿದ್ದಾರೆ.

English summary
Bangalore Quake Alert : It has been reported that Bangalureans made a whopping 45 lakh calls on Wednesday(Apr.11) to their kith and kin both inside and outside the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X