ಹೀನಾ ರಬ್ಬಾನಿ ಸಚಿವ ಸ್ಥಾನಕ್ಕೆ ಕುತ್ತಿಲ್ಲ: ಪಾಕ್

ಸಚಿವೆ ಹಿನಾ ರಬ್ಬಾನಿ ಖಾರ್ ಅವರು ವಿದೇಶಾಂಗ ಸಚಿವೆಯಾಗಿ ಮುಂದುವರೆಯಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಂಗಳವಾರ(ಏ.10) ತಡರಾತ್ರಿ ಪಾಕಿಸ್ತಾನದ ಪ್ರಧಾನಮಂತ್ರಿ ಸಚಿವಾಲಯ ತಿಳಿಸಿದೆ.
ಏನಿದು ವಿವಾದ: ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಅಮೆರಿಕದ ರಾಜತಾಂತ್ರಿಕರ ಜೊತೆಗಿನ ಮಾತುಕತೆ ವೇಳೆ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಹೇಳಿಕೆಗೆ ವ್ಯತಿರಿಕ್ತವಾದ ಸಚಿವೆ ಹಿನಾ ರಬ್ಬಾನಿ ಖಾರ್ ಹೇಳಿಕೆ ನೀಡಿದ್ದರು.
ಇದಾದ ನಂತರ ಲಾಹೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, 'ನೂತನ ತಂಡವು ಕಾಶ್ಮೀರದ ಸಮಸ್ಯೆಯಂತಹ ವಿಷಯಗಳ ಕುರಿತು ಭಾರತದೊಂದಿಗೆ ಮಾತುಕತೆ ಮುಂದುವರಿಸಲಿದೆ' ಎಂದಿದ್ದರು.
ಪಾಕಿಸ್ತಾನ ಸಚಿವ ಸಂಪುಟ ಬದಲಾವಣೆ ವೇಳೆಯಲ್ಲಿ ಹಿನಾ ಅವರಿಗೆ ಬೇರೆ ಖಾತೆ ಕೊಟ್ಟು ಬಿಡಿ ಎಂದು ರಬ್ಬಾನಿ ಪ್ರತಿನಿಧಿಸುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿಗೆ ಮನವಿ ಮಾಡಿದೆ ಎನ್ನಲಾಗಿದೆ.
ಅಮೆರಿಕದ ವಿದೇಶಾಂಗ ಉಪಕಾರ್ಯದರ್ಶಿ ಥಾಮಸ್ ನೈಟ್ಸ್ ನೇತೃತ್ವದ ಅಮೆರಿಕದ ನಿಯೋಗವು ಏ.4ರಂದು ಲಾಹೋರ್ ಗವರ್ನರ್ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಿನಾ ರಬ್ಬಾನಿ ಖಾರ್ ಬಹಿರಂಗವಾಗಿ ಅಧ್ಯಕ್ಷ ಜರ್ದಾರಿಯವರ ಹೇಳಿಕೆಗೆ ವ್ಯತಿರಿಕ್ತ ಅಭಿಪ್ರಾಯ ಪ್ರಕಟಿಸಿರುವುದು ಅಚ್ಚರಿ ಮೂಡಿಸಿತ್ತು ಎಂದು ರಾಜತಾಂತ್ರಿಕ ಮೂಲಗಳು ಹೇಳಿದೆ.












Click it and Unblock the Notifications