ಅನುಮಾನವೇ ಇಲ್ಲ; ನಮಗಿಂತ ಪಾಕ್ ಕೈಮೇಲು
ಕರಾಚಿ,
ಏ.11: ಅನುಮಾನವೇ ಇಲ್ಲ. ನಮಗಿಂತ ಪಾಕಿಸ್ತಾನದ ಒಂದು ಕೈಮೇಲು. ಯಾವುದರಲ್ಲಿ ಅಂದರಾ? ಅದರ ಅಣ್ವಸ್ತ್ರ ಕೋಠಿ ಎಷ್ಟು ತ್ವರಿತವಾಗಿ, ಅಗಾಧವಾಗಿ ಬೆಳೆಯುತ್ತಿದೆ ಅಂದರೆ ಅದು ವಾರ್ಷಿಕ 2.5 ಶತಕೋಟಿ ಡಾಲರ್ ವೆಚ್ಚ ಮಾಡಿ, ತನ್ನ ಅಣ್ವಸ್ತ್ರವನ್ನು ಸಬಲಗೊಳಿಸುತ್ತಿದೆ ಎನ್ನುತ್ತಿದೆ ವರದಿಯೊಂದು. ಅದಕ್ಕಿಂತ ಆತಂಕಕಾರಿ ಸಂಗತಿಯೆಂದರೆ ಪಾಕಿಸ್ತಾನ ಪ್ಲುಟೋನಿಯಂ ಆಧರಿತ ಅಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿರುವುದು. id="toptextpromo">ಪಾಕ್
ಅಣ್ವಸ್ತ್ರಗಳಂತೂ ಭಾರತಕ್ಕಿಂತ ಅಧಿಕವಾಗಿದೆ. ಪಾಕ್ ಸೈನ್ಯದ ಬಳಿ 100ಕ್ಕೂ ಹೆಚ್ಚು ಅಣ್ವಸ್ತ್ರಗಳಿವೆ ಎಂದು ಅಂದಾಜಿಸಲಾಗಿದೆ. ಅದೇ ಭಾರತದ ಬಳಿ ಸುಮಾರು 75 ಅಣ್ವಸ್ತ್ರಗಳಿವೆ ಎಂದು ಅಂದಾಜಿಸಲಾಗಿದೆ. ಎರಡನೇ ಪೀಳಿಗೆಯ ಅಣ್ವಸ್ತ್ರ ತಯಾರಿಕೆಗೂ ಪಾಕಿಸ್ತಾನ ಕೈಹಾಕಿದೆ. id='are-slot-1' class='oiad oi-axt oiadv'> id='top-searched-articles'>ಇನ್ನು
ಭೂ ಮತ್ತು ಸಮುದ್ರ ನೆಲೆಯಿಂದ ಅಸ್ತ್ರ ಪ್ರಯೋಗಕ್ಕೆ ಅತ್ಯಂತ ಸುಧಾರಿತ ಮಾಧ್ಯಮಗಳನ್ನು ಪಾಕಿಸ್ತಾನ ಕಂಡುಕೊಳ್ಳುತ್ತಿದೆ. ಗಮನಾರ್ಹವೆಂದರೆ ಅಣ್ವಸ್ತ್ರಗಳು necessary evil ಎನಿಸಿದ್ದರೂ ಅಣ್ವಸ್ತ್ರದಲ್ಲಿ ಬಲಿಷ್ಠವಾಗಲು ಭಾರತಕ್ಕೆ ಆಸಕ್ತಿಯಿಲ್ಲ.











Click it and Unblock the Notifications