'ಇಂದಿನ ಮಾಧ್ಯಮಗಳಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ'

Posted By:
Subscribe to Oneindia Kannada
corruption-in-journalism-too-lk-advani
ಇಂದೋರ್, ಏ.11: ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಕಳೆದೊಂದು ವಾರದಿಂದ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ ಶಿಸ್ತಿನ ಪಕ್ಷ ಬಿಜೆಪಿಯ ಹಿರಿಯ ಸೇನಾನಿ ಎಲ್ ಕೆ ಅಡ್ವಾಣಿ ಅವರು ಇಂದಿನ ಮಾಧ್ಯಮಗಳಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ ಎಂಬ ಕಹಿ ಸತ್ಯ ನುಡಿದಿದ್ದಾರೆ.

ಮಾಧ್ಯಮಗಳು ಸುದ್ದಿಗಳನ್ನು ವೈಭವೀಕರಿಸುತ್ತಾ, ಪ್ರಚೋದನಾತ್ಮಕವಾಗಿ ಕಿಚ್ಚುಹಚ್ಚುತ್ತಿವೆ. ಮುದ್ರಣ ಮಾಧ್ಯಮಕ್ಕಿಂತ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಮಾಧ್ಯಮಗಳಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ' ಎಂದು ಬಿಜೆಪಿ ರಾಷ್ಟ್ರೀಯ ನಾಯಕ ಎಲ್ ಕೆ ಅಡ್ವಾಣಿ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು 'ಇಂದೋರ್ ಪ್ರೆಸ್ ಕ್ಲಬ್ ಗೆ 50 ವರ್ಷ' ಸಂದ ನಿಮಿತ್ತ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಈ ಕಹಿ ಸತ್ಯ ಹೊರಹಾಕಿದರು.

'ಸುದ್ದಿಯನ್ನು ಸುದ್ದಿಯಾಗಷ್ಟೇ ಹೇಳುತ್ತಿಲ್ಲ. ಸುದ್ದಿಯಲ್ಲಿ ಪ್ರಚೋದನೆಯಿಲ್ಲದಿದ್ದರೆ ಜನ ಅದನ್ನು ನೋಡುವುದಿಲ್ಲ. ಆದ್ದರಿಂದ ಭಾವ ಪ್ರಚೋದನಾತ್ಮಕಾಗಿ ಸುದ್ದಿ ಹೇಳಲಾಗುತ್ತಿದೆ ಎಂದು ಮಾಹಿ ಉಪ ಪ್ರಧಾನಿ ಅಡ್ವಾನಿ ಕಿಡಿಕಾರಿದರು.

paid-news: 'ಈ ಹಿಂದೆ ಭ್ರಷ್ಟಾಚಾರ ಎಂಬುದು ನಮ್ಮ ರಾಜಕೀಯದಲ್ಲಿದೆ ಎಂದು ಭಾವಿಸಲಾಗಿತ್ತು. ಆದರೆ ಅದೀಗ ಮಾಧ್ಯಮದಲ್ಲಿಯೂ ನುಸುಳಿದೆ. ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಕ್ಕೂ ಈ ಭಯಂಕರ ಪಿಡುಗು ಬಡಿದಿದೆ. ಮಾಧ್ಯಮ ದಿನೇ ದಿನೆ ಹದಗೆಡುತ್ತಿದೆ. ಆದರೆ ಮಾಧ್ಯಮವನ್ನು ಉನ್ನತೀಕರಿಸಲು ಇನ್ನೂ ಸಾಕಷ್ಟು ಅವಕಾಶವಿದೆ' ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Expressing concern over 'sensational presentation of news', BJP leader LK Advani has said in Indore that more than the print media, it is the electronic media which has to be blamed for it. The signs of a paid-news are quite obvious in some news.
Please Wait while comments are loading...