ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್ ಕನ್ನಡ ಕಚೇರಿಯಲ್ಲಿ ಭೂಕಂಪದ ಅನುಭವ

|
Google Oneindia Kannada News

Oneindia web portal office Bangalore feel tremors
ಬೆಂಗಳೂರು, ಏ 11: ಮಧ್ಯಾಹ್ನ 1.30 ರಿಂದ 2.30 ಒನ್ ಇಂಡಿಯಾ ಕನ್ನಡ ಕಚೇರಿಗೆ ಊಟದ ಸಮಯ. ಇದೀಗ ಸ್ವಲ್ಪ ಹೊತ್ತಿಗೆ ಮುಂಚೆ ಅಂದರೆ ಭಾರತೀಯ ಕಾಲಮಾನ 2.20ರ ಸುಮಾರಿಗೆ ಸಂಭವಿಸಿದ ಭೂಕಂಪದ ಸ್ಪಷ್ಟ ಅನುಭವ ಜಯನಗರ ಮೂರನೇ ಬ್ಲಾಕ್ ನಲ್ಲಿರುವ ಒನ್ ಇಂಡಿಯಾ ಕಚೇರಿ ಸಿಬ್ಬಂದಿಗಳಿಗೆ ಆಗಿದೆ.

ಊಟ ಮುಗಿಸಿ ಬಂದ ಸಿಬ್ಬಂದಿಗಳು ತಮ್ಮ ತಮ್ಮ ಸೀಟ್ ನಲ್ಲಿ ಕೂತಾಗ ಚೇರ್ ಗಳು ಅಲುಗಾಡಿದ, ಕಂಪ್ಯೂಟರುಗಳು ಕುಲುಕಾಡಿದ ಅನುಭವವಾಗಿದ್ದು ಕಚೇರಿಯಿಂದ ಕೆಲವರು ಹೊರ ಓಡಿ ಬಂದು ರಸ್ತೆಯಲ್ಲಿ ಜಮಾಯಿಸಿದ್ದರು. ಆದರೆ ಕೆಲವು ಶೂರರು ಸೀಟ್ ಬಿಟ್ಟು ಕದಲಿಲ್ಲ.

ಎರಡನೇ ಮತ್ತು ಮೂರನೇ ಅಂತಸ್ತಿನಿಂದ ಕಾರ್ಯ ನಿರ್ವಹಿಸುವ ಒನ್ ಇಂಡಿಯಾ ಕಚೇರಿಯ ಮೂರನೇ ಅಂತಸ್ತಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಮಾತ್ರ ಇದರ ಅನುಭವಾಗಿದೆ. ಭೂಕಂಪಿಸಿದ ಸುದ್ದಿ ಬಂದ ಕೂಡಲೇ ಸಂಸ್ಥೆಯ ಅಡ್ಮಿನ್ ವಿಭಾಗದ ಸಿಬಂದಿಗಳು ಲಿಫ್ಟ್ ಬಂದ್ ಮಾಡಿಸಿದ್ದಾರೆ.

ರಾಜ್ಯದ ಇತರ ಭಾಗಗಳಲ್ಲಿ ಕೂಡ ಭೂ ಕಂಪಿಸಿದ ವರದಿಯಾಗಿದೆ. ತುಮಕೂರು, ಮೂಡಿಗೆರೆ, ಹುಬ್ಬಳ್ಳಿ, ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆಯಿಂದ ಭೂಕಂಪದ ವರದಿ ಬರುತ್ತಿದೆ.

ಯಾವುದೇ ಅಪಾಯ, ನಷ್ಟ ಸಂಭವಿಸಲಿಲ್ಲ, ಸಂಸ್ಥೆಯ ಸಿಬ್ಬಂದಿಗಳು ಭೂಕಂಪದ ಹೆಚ್ಚಿನ ಮತ್ತು ತಾಜಾ ಮಾಹಿತಿ ನೀಡುವಲ್ಲಿ ನಿರತರಾಗಿದ್ದಾರೆ. ಒನ್ ಇಂಡಿಯಾ ಕನ್ನಡದ ಎಡಿಟರ್ ಶ್ಯಾಮ್ ಸುಂದರ್ ಇದಕ್ಕೆ ತಲೆ ಕೆಡಿಸಿಕೊಳ್ಳದೆ ಒಂದೇ ಸಮನೆ ಟ್ವೀಟ್ ಮಾಡುತ್ತಿದ್ದಾರೆ ಮತ್ತು ಸುದ್ದಿಸಂಗ್ರಹ ಮಾಡುವಲ್ಲಿ ನಿರತರಾಗಿದ್ದಾರೆ.

English summary
Oneindia web portal office felt the Wednesday afternoon tremors, India lunch hour. The tremor was very mild and shook the building on Elephant Rock Road, Jayanagar for fraction of seconds. However, the Multi lingual Portal staff kept themselves busy gathering earth quake news from far and wide. 8.7 magnitude tremors felt in Sumatra, Indonesia 33 KMs beneth the Sea. The Tsunami is likely to hit East Coast, Andaman Islands at 3.46 IST. The tremors are also Felt in several places in Interior Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X