ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓ ಗಾಡ್, ಬಚಾವ್! ಯಾವುದೇ ಪ್ರಾಣಾಪಾಯವಾಗಿಲ್ಲ!

By Srinath
|
Google Oneindia Kannada News

karnataka-experiences-earthquake-no-casualty
ಬೆಂಗಳೂರು, ಏ.11: ಸದ್ಯಕ್ಕೆ ಯಾವುದೇ ಅಪಾಯವಾಗಿಲ್ಲ ೆಂದು ಜನ ನಿಟ್ಟುಸಿರು ಬಿಟ್ಟು, ದೇವರಿಗೆ ಕೈಮುಗಿದಿದ್ದಾರೆ. ಆದರೆ ಆತಂಕದಿಂದ ಹೊರಗೆ ಬಂದಿದ್ದ ಜನ, ಮತ್ತೆ ಒಳ ಹೋಗುವ ಸಾಹಸ ಮಾಡುತ್ತಿಲ್ಲ. ಆತಂಕದಿಂದ ಗುಂಪುಗೂಡಿ ಮಾತನಾಡಿಕೊಳ್ಳುತ್ತಿದ್ದಾರೆ. ಯಾವಾಗ ಏನಾಗುತ್ತದೋ ಎಂಬ ಚಿಂತೆಯ ಗೆರೆಗಳು ಮೂಡಿವೆ.

ಬೆಂಗಳೂರಿನಲ್ಲೂ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಆದರೆ ಇದು ಎಲ್ಲರ ಅನುಭವಕ್ಕೂ ಬಂದಿಲ್ಲ. ಯಳಚೇನಹಳ್ಳಿಯಲ್ಲಿ ಕಟ್ಟಡ ವಾಲಿದೆ. ಮೆಜಿಸ್ಟಿಕ್ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಆ ಭಾಗದಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಮೆಟ್ರೋ ರೈಲು ಸಂಚಾರ ಸ್ಥಗತಗೊಳಿಸಲಾಗಿದೆ.

ತುಮಕೂರು, ಮೂಡಿಗೆರೆ, ಧಾರವಾಡ, ಉಡುಪಿ, ಹುಬ್ಬಳ್ಳಿ, ಮಂಗಳೂರಿನಲ್ಲೂ ಭೂಕಂಪವಾದ ಅನುಭವವಾಗಿದೆ. ಕರ್ನಾಟಕದ ಇತರೆ ಭಾಗಗಳಲ್ಲಿ ಭುಕಂಪದ ಅನುಭವವಾಗಿಲ್ಲ. ಸಮುದ್ರ ತೀರದಲ್ಲಿರುವ ಮಂಗಳೂರಿನ ಜನಕ್ಕೆ ಎಚ್ಚರಿಕೆ ನೀಡಲಾಗಿದೆ. ಸಂಜೆ ವೇಳೆಗೆ ಹೇಗೋ, ಏನೋ!?

ಇಂಡೋನೇಷ್ಯಾದಲ್ಲಿ ಸಂಭವಿಸಿರುವ 8.7 ಪ್ರಮಾಣದ ಈ ಭೂಕಂಪದಿಂದ ಸದ್ಯಕ್ಕೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇಷ್ಟೊಂದು ಭಾರಿ ಪ್ರಮಾಣದ ಭೂಕಂಪದಿಂದ ಭಾರತದ ತೀರ ಪ್ರದೇಶಕ್ಕೆ ಅಪಾಯವಾಗುವ ಸಂಭವವಿದೆ. ಆದರೆ ಸದ್ಯಕ್ಕೆ ಸುನಾಮಿಯ ಪ್ರಭಾವದಿಂದಾಗಿ ಸಮುದ್ರದಲ್ಲಿ ನೀರು ಉಕ್ಕಿಬಂದ ಕುರುಹುಗಳಿಲ್ಲ.

English summary
Karnataka experiences earthquake no casualty, Indonesia has issued a tsunami warning after a quake with a preliminary magnitude of 8.9 hit waters off westernmost Aceh province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X