ಟೆಕ್ ಮಹೀಂದ್ರದಲ್ಲಿ 10 ಸಾವಿರ ಉದ್ಯೋಗಾವಕಾಶ

'ನಮ್ಮಲ್ಲಿರುವ ಮಾನವ ಸಂಪನ್ಮೂಲ ಸಮರ್ಥವಾಗಿ ಬಳಕೆ ಮಾಡಲು ಯೋಜನೆ ಸಿದ್ಧವಾಗಿದೆ. ಜೊತೆಗೆ 5 ರಿಂದ 10 ಸಾವಿರ ಉದ್ಯೋಗಿಗಳ ನೇಮಕಾತಿ ಸಾಧ್ಯತೆ ಇದೆ' ಎಂದು ನಾಯರ್ ಹೇಳಿದ್ದಾರೆ.
ಸದ್ಯಕ್ಕೆ ಎರಡು ಕಂಪನಿಗಳನ್ನು ಸೇರಿಸಿ 75,000 ಉದ್ಯೋಗಿಗಳಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಟೆಕ್ ಮಹೀಂದ್ರಾ ಸುಮಾರು 4,413 ಉದ್ಯೊಗಿಗಳನ್ನು ನೇಮಕ ಮಾಡಿಕೊಂಡಿತ್ತು. ಸತ್ಯಂ ಕಂಪ್ಯೂಟರ್ಸ್ 3,014 ಹೊಸ ಉದ್ಯೋಗಿಗಳನ್ನು ಸೇರಿಸಿಕೊಂಡಿತ್ತು. [ಇದನ್ನು ಓದಿ: ಟೆಕ್ ಎಂ ಮಹೀಂದ್ರಾ ವಿಲೀನ, ಸತ್ಯಂ ಷೇರು ಜಿಗಿತ]
ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯ ಭಾಗವಾಗಿರುವ ಟೆಕ್ ಮಹೀಂದ್ರಾ ಸಂಸ್ಥೆ ಸರ್ಕಾರಿ ಹರಾಜಿನಲ್ಲಿ ಸತ್ಯಂ ಸಂಸ್ಥೆಯನ್ನು 2009ರಲ್ಲಿ ಖರೀದಿಸಿತ್ತು. ಸತ್ಯಂನ ಸ್ಥಾಪಕ ಸಿಇಒ ರಾಮಲಿಂಗರಾಜು ಐಟಿ ಲೋಕ ಬೆರಗಾಗುವಂಥ ಹಗರಣಕ್ಕೆ ಸಂಸ್ಥೆಯನ್ನು ದೂಡಿದ್ದರು.












Click it and Unblock the Notifications