• search

ಕೋಯ್ನಾ ಡ್ಯಾಂನಿಂದ ನೀರು ಬಿಡಲು ರಾಜ್ಯದ ಮನವಿ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Basavaraj Bommai
  ಬೆಂಗಳೂರು, ಏ. 10 : ಭೀಕರ ಬರಗಾಲದಿಂದ ತತ್ತರಿಸಿರುವ ಉತ್ತರ ಕರ್ನಾಟಕಕ್ಕೆ ಮಹಾರಾಷ್ಟ್ರದ ಕೋಯ್ನಾ ಅಣೆಕಟ್ಟೆಯಿಂದ ನೀರು ಬಿಡುವಂತೆ ಮನವಿ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರನ್ನು ಕರ್ನಾಟಕ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದ ನಿಯೋಗ ಭೇಟಿಯಾಗಲಿದೆ.

  ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಿಜಾಪುರ, ರಾಯಚೂರು, ಬೀದರ, ಗುಲಬರ್ಗಾ, ಯಾದಗಿರಿ, ಬಾಗಲಕೋಟೆಗಳಲ್ಲಿ ಜನರಿಗೆ ಕನಿಷ್ಠ ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಈ ಬೇಸಿಗೆಯಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಮೇವಿಗೆ ಹಣವಿಲ್ಲದೆ ಯಾದಗಿರಿ ಜಿಲ್ಲೆಯಲ್ಲಿ ರೈತರು ಜಾನುವಾರುಗಳನ್ನು ಆಂಧ್ರಕ್ಕೆ ಮಾರುತ್ತಿದ್ದಾರೆ.

  ಈ ನಿಟ್ಟಿನಲ್ಲಿ ಜನರ ದಾಹವನ್ನು ತಣಿಸುವ ಉದ್ದೇಶದಿಂದ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ ಮುಂತಾದವರಿರುವ ನಿಯೋಗ ಚೌಹಾಣ್ ಅವರನ್ನು ಭೇಟಿ ಮಾಡಲಿದೆ. ಸಾತಾರಾ ಜಿಲ್ಲೆಯಲ್ಲಿರುವ ಕೋಯ್ನಾ ಅಣೆಕಟ್ಟೆಯಿಂದ 4 ಟಿಎಂಸಿ ನೀರನ್ನು ಬಿಡಬೇಕೆಂದು ಆಗ್ರಹಿಸುವುದಾಗಿ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಐದು ನದಿಗಳ ಜಿಲ್ಲೆ ಎಂದು ಹೆಸರಾಗಿರುವ ಬಿಜಾಪುರದ ಭೀಮಾ ತೀರದಲ್ಲಿನ ಜನರು ನೀರಿಗಾಗಿ ಸರಕಾರದತ್ತ ನೋಡುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿನ ನಾರಾಯಣಪುರ ಅಣೆಕಟ್ಟು ಸಂಪೂರ್ಣ ಒಣಗಿದೆ. ಏಪ್ರಿಲ್ ತಿಂಗಳ ಮಳೆಯ ಸುಳಿವೂ ಇಲ್ಲ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ನೀರು ತರಿಸಿದರೆ ಆಕಾಶದತ್ತ ಮುಖಮಾಡಿ ಕುಳಿತಿರುವ ಜನರ ದಾಹ ತುಸುವಾದರೂ ತಣಿದೀತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Karnataka delegation involving irrigation minister Basavaraj Bommai is meeting Maharashtra Chief Minister Prithviraj Chauhan requesting 4 TMC water release from Koyna dam in Satara district.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more