28 ಸಾವಿರಕ್ಕೆ ಕುಸಿದ ಚಿನ್ನದ ಬೆಲೆ, ಗ್ರಾಹಕ ಖುಷ್

Posted By:
Subscribe to Oneindia Kannada
Spot gold up at Rs 28,075 per 10 grams

ಬೆಂಗಳೂರು, ಏ.10: ಕಳೆದ 21 ದಿನಗಳಿಂದ ಚಿನ್ನ ಆಭರಣ ಮಳಿಗೆ ವ್ಯಾಪಾರಿಗಳ ಬಂದ್ ನಡೆಸಿದ್ದ ಪರಿಣಾಮವೋ ಏನೋ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ.

ಷೇರುಪೇಟೆಯಲ್ಲಿ ಸೋಮವಾರ (ಏ.9) ಚಿನ್ನದ ವ್ಯಾಪಾರ ಸಾಧಾರಣವಾಗಿದ್ದರೂ, ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಗ್ರಾಹಕನಿಗೆ ಕೊಂಚ ಹರ್ಷ ಮೂಡಿಸಿದೆ.

ದೇಶದ ಇತರೆಡೆ 10 ಗ್ರಾಂ ಚಿನ್ನದ ಬೆಲೆ 28,075 ರು. 1 ಕೆಜಿ ಬೆಳ್ಳಿ ಬೆಲೆ 55,776 ರು ಇದೆ. ಬೆಂಗಳೂರಿನಲ್ಲಿ ಮಂಗಳವಾರ(ಏ.10) 24K ಚಿನ್ನ 27,900.00 ಹಾಗೂ 22K ಚಿನ್ನ 25, 750.00 ಇದೆ.1 ಕೆಜಿ ಬೆಳ್ಳಿ ಬೆಲೆ 57,300 ರು ನಷ್ಟಿದೆ ಎಂದು ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆ ಹೇಳಿದೆ.

Multi Commodity Exchange ನ ವರದಿಯಂತೆ 10 ಗ್ರಾಂ ಚಿನ್ನದ ಬೆಲೆ 28,328 ರು ನಿಂದ 28,374 ರು ತನಕ ವಹಿವಾಟು ನಡೆದಿದೆ.

ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸುವವರಿಗೆ ಇದು ಶುಭ ಸೂಚಕವಾಗಿದೆ. ಆದರೆ, ಚಿನ್ನದ ಮೇಲೆ ಬಂಡವಾಳ ಹೂಡಲು ಮುಂದಾಗಿದ್ದವರಿಗೆ ಕೊಂಚ ಹಿನ್ನೆಡೆ ಉಂಟಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಫ್ಯೂಚರ್ ಗೋಲ್ಡ್ ಮಾರುಕಟ್ಟೆಯಲ್ಲಿ ಅಂಥಾ ವ್ಯತ್ಯಾಸ ಕಂಡು ಬಂದಿಲ್ಲ.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fllowing the 21 days strike called by jewellers after the announcement of the Union Budget. Spot gold was seen trading up at Rs 28,075 per 10 grams, whereas spot silver for 1 kg was seen trading lower at Rs 55,776.
Please Wait while comments are loading...