ಎಚ್ಚರ: KSRTC ಸಿಬ್ಬಂದಿ ಮುಷ್ಕರ ಏ. 14ರಿಂದ

ರಾಜ್ಯ ಸರಕಾರಿ ನೌಕರರು ಮತ್ತು KSRTC ಸಿಬ್ಬಂದಿ ನಡುವೆ ಸಂಬಳ ತಾರತಮ್ಯವಿದೆ. KSRTC ಸಿಬ್ಬಂದಿ ಸಂಬಳಗಳು ರಾಜ್ಯ ಸರಕಾರಿ ನೌಕರರಿಗಿಂತ ಶೇ. 30ರಷ್ಟು ಕಡಿಮೆಯಿದೆ. ಜತೆಗೆ ದಿನದ 16 ಗಂಟೆ ದುಡಿಯುತ್ತಾರೆ. ಹೀಗಾಗಿ ತಮಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ, ಮುಷ್ಕರದಲ್ಲಿ ತೊಡಗುವುದಾಗಿ ಅನಂತ ಸುಬ್ಬರಾವ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
'ಗಮನಾರ್ಹವೆಂದರೆ ರಾಜ್ಯ ಸರಕಾರಿ ನೌಕರರ ಸಂಬಳ ಕೇಂದ್ರ ಸರಕಾರಿ ನೌಕರರ ಸಂಬಳಕ್ಕಿಂತ ಶೇ. 40ರಷ್ಟು ಕಡಿಮೆಯಿದೆ. ಅಂದರೆ KSRTC ಸಿಬ್ಬಂದಿ ಶೇ. 70ರಷ್ಟು ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಆದರೂ ನಮ್ಮ ಚಾಲಕರು, ನಿರ್ವಾಹಕರು ಮತ್ತು ಮೆಕ್ಯಾನಿಕಲ್ ಸಿಬ್ಬಂದಿ ಡಬಲ್ ಡ್ಯೂಟಿ ಮಾಡುತ್ತಿದ್ದಾರೆ. ತಕ್ಷಣ ತಾರತಮ್ಯ ನಿವಾರಣೆ ಮಾಡಿ, ಇಲ್ಲವೇ ಏ. 14ರಿಂದ ರಾಜ್ಯಾದ್ಯಂತ ಮುಷ್ಕರ ಹೂಡುವುದು ನಿಶ್ಚಿತ' ಎಂದು ಅನಂತ ಸುಬ್ಬರಾವ್ ಎಚ್ಚರಿಸಿದ್ದಾರೆ.
ಇಡೀ ರಾಜ್ಯದಲ್ಲಿ 1.1 ಲಕ್ಷ ನೌಕರರಿದ್ದಾರೆ. 22,000 ಬಸ್ಸುಗಳು ಇವೆ. ಇಲಾಖೆಯು ಡಬಲ್ ಡ್ಯೂಟಿ ಸಿಬ್ಬಂದಿಯನ್ನು ಗೋಳುಹೊಯ್ಡುಕೊಳ್ಳುತ್ತಿದೆ, ಅವಮಾನ ಮಾಡುತ್ತಿದೆ. ಈ ಸಿಬ್ಬಂದಿಯ ಕೊರತೆಯೂ ಇದೆ. ಆದ್ದರಿಂದ ತಕ್ಷಣ ಅಗತ್ಯ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಬೇಕು ಎಂದು ಸುಬ್ಬರಾವ್ ಆಗ್ರಹಿಸಿದ್ದಾರೆ.












Click it and Unblock the Notifications