BIAL 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'

ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಚಿವ ಅಜಿತ್ ಸಿಂಗ್ ಅವರು ತಮಗೆ ಈ ಮಾಹಿತಿ ನೀಡಿದ್ದಾರೆ ಎಂದು ಎಸ್ಎಂ ಕೃಷ್ಣ ಶುಕ್ರವಾರ ಬೆಳಗ್ಗೆ ತಿಳಿಸಿದ್ದಾರೆ. 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂಬ ನೂತನ ನಾಮಕರಣದ ಕುರಿತು ಅಧಿಕೃತ ಪ್ರಕಟಣೆಗೆ ಇನ್ನು ಒಂದೆರಡು ಕಡತಗಳಿಗೆ ಅನುಮೋದನೆ ಬೀಳಬೇಕಿದೆ ಅಷ್ಟೆ.
ಸರಿಯಾಗಿ ಒಂದು ವರ್ಷದ ಹಿಂದೆಯೇ, ರಾಜ್ಯ ಸಚಿವ ಸಂಪುಟವು ಹಾಲಿ BIAL ಅನ್ನು 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ವನ್ನಾಗಿ ಹೆಸರು ಬದಲಾಯಿಸಲು ಕೇಂದ್ರಕ್ಕೆ ಅನುಮೋದನೆ ಕಳಿಸಿತ್ತು.
ಈ ವಿಮಾನ ನಿಲ್ದಾಣ ಆರಂಭವಾದಾಗ ಅದಕ್ಕೆ ಯಾವ ಹೆಸರಿಡಬೇಕು ಎಂಬುದರ ಬಗ್ಗೆ ಭಾರಿ ಚರ್ಚೆಗಳಾಗಿದ್ದವು. ಬಸವಣ್ಣ, ಸರ್ ಎಂ ವಿಶ್ವೇಶ್ವರಯ್ಯ, ಕುವೆಂಪು, ಅಂಬೇಡ್ಕರ್ ಮುಂತಾದ ಹೆಸರುಗಳು ಕೇಳಿಬಂದಿದ್ದವು. ಆದರೆ ಈಗ ಅದಕ್ಕೆಲ್ಲ ತೆರೆಬಿದ್ದಿದ್ದು, ಕೆಂಪೇಗೌಡ ಹೆಸರು ಅಂತಿಮವಾಗಿದೆ.












Click it and Unblock the Notifications