ಹಗರಣದಿಂದ ಬಚಾವ್ ಆಗೋದು ಹೇಗೆ? ಸಬಿತಾನಾ ಕೇಳ್ರಿ

22 ವರ್ಷಕ್ಕೆ ಐಎಎಸ್ ಪಟ್ಟಕ್ಕೇರಿದ್ದ ಶ್ರೀಲಕ್ಷ್ಮಿಯನ್ನು ದಾಳವಾಗಿ ಬಳಸಿಕೊಂಡ ವೈಎಸ್ ರಾಜಶೇಖರ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಅವರು ಮುಂದೊಂದು ದಿನ ಆಕೆಯನ್ನು ತುಳಿಯಲು ಆಗಲೇ ನಿರ್ಧರಿಸಿದ್ದರು.
ಸಬಿತಾ ರೆಡ್ಡಿ ತನ್ನನ್ನು ತಾನ ಉಳಿಸಿಕೊಳ್ಳಲು ಅನ್ಯ ಜಾತಿಗೆ ಸೇರಿರುವ ಶ್ರೀಲಕ್ಷ್ಮಿಯನ್ನು ಬಲಿಕೊಟ್ಟಿದ್ದಾರೆ ಎಂಬ ಮಾಧ್ಯಮಗಳ ವರದಿಗೆ ಈಗ ಉತ್ತರ ಸಿಕ್ಕಿದೆ.
ಇಲ್ಲಿದೆ ಸಬಿತಾ ಉತ್ತರ: ಸರ್ಕಾರಿ ಅಧಿಕಾರಿಗಳ ಅಧಿಕಾರ ದುರುಪಯೋಗವೇ ಓಬಳಾಪುರಂ ಮೈನಿಂಗ್ ಹಗರಣಕ್ಕೆ ನಾಂದಿ ಹಾಡಿತು. ಅಧಿಕಾರಗಳ ಮೇಲೆ ಆಗಿನ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಕೃಪೆ ಇದ್ದಿರಬಹುದು ಎಂದು ಸಬಿತಾ ಸಾಕ್ಷಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಸಾಕ್ಷಿಯಾಗಿರುವ ಸಬಿತಾ, ಹಗರಣ ನಡೆದಾಗ ಆಂಧ್ರದ ಗಣಿಗಾರಿಕೆ ಸಚಿವೆಯಾಗಿದ್ದರು. ಸದ್ಯ ಜೈಲಿನಲ್ಲಿರುವ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರು ಗಣಿ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕುವಂತೆ ಹಲವು ಬಾರಿ ದುಂಬಾಲು ಬಿದ್ದಿದ್ದರು. ನಾನು ಒಪ್ಪಲಿಲ್ಲ.
ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ರಾಜ ಗೋಪಾಲ್ ಐಎಎಸ್, ಶ್ರೀಲಕ್ಷ್ಮಿ ಐಎಎಸ್ ಜೈಲುವಾಸ ಅನುಭವಿಸುತ್ತಿದ್ದಾರೆ. ವೈಎಸ್ ಆರ್, ಶ್ರೀಲಕ್ಷ್ಮಿ ಹಾಗೂ ಇತರೆ ಅಧಿಕಾರಿಗಳೇ ಹಗರಣಕ್ಕೆ ಕಾರಣ ಎಂದು ಹೇಳುವ ಮೂಲಕ ಪ್ರಕರಣದಿಂದ ಹೊರಕ್ಕೆ ಬರಲು ಸಬಿತಾ ಯೋಜಿಸಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ಸಬಿತಾ ಹೆಸರು ಸೇರಲು ಸಿಬಿಐ ಕೂಡಾ ಹಿಂದು ಮುಂದು ನೋಡುತ್ತಿದೆ. ಜಾತಿ ರಾಜಕಾರಣ ಆಂಧ್ರದಿಂದ ಕೇಂದ್ರದ ಮುಖಂಡರ ತನಕ ಎಲ್ಲರನ್ನು ಆಡಿಸುತ್ತಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ನ ಮುಖಂಡರು ಆರೋಪಿಸಿದ್ದಾರೆ.












Click it and Unblock the Notifications