ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಏ.8ಕ್ಕೆ ಮಲ್ಪೆಯಲ್ಲಿ ಬೀಚ್ ಆಹಾರ ಉತ್ಸವ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Beach Aahar Utsav 2012 Udupi
  ಉಡುಪಿ, ಎ.5: ಎ.8ರ ರವಿವಾರ ಮಲ್ಪೆಯ ಸಮುದ್ರ ಕಿನಾರೆಯಲ್ಲಿ ಸಂಜೆ 3ರಿಂದ ರಾತ್ರಿ 8 ಗಂಟೆಯವರೆಗೆ 'ಬೀಚ್ ಆಹಾರೋತ್ಸವ' ಆಯೋಜಿಸಲಾಗಿದೆ. ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ರಜತ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾರ್ಯಾಧ್ಯಕ್ಷ ರಂಜನ್ ಕಲ್ಕೂರ ಹೇಳಿದ್ದಾರೆ.

  ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಶಾಖಾಹಾರಿ ಖಾದ್ಯಗಳ ವಿಶಿಷ್ಟ ಆಹಾರೋತ್ಸವ ನಡೆಯುತ್ತಿದೆ.

  ಉಡುಪಿಯ ವಿವಿಧ ಖಾದ್ಯಗಳ ಬಗ್ಗೆ ಇಲ್ಲಿ ಪ್ರಾತ್ಯಕ್ಷಿಕೆ ಹಾಗೂ ಆಹಾರೋತ್ಸವ ನಡೆಯಲಿದೆ ಎಂದರು.

  ಬೆಲೆ ಕಡಿಮೆ : ಶ್ರೀಸಾಮಾನ್ಯನಿಗೂ ಕೈಗಟಕುವ 10 ಹಾಗೂ 20 ರು.ಬೆಲೆ ಇರಿಸಲಾಗಿದೆ. ಇದರೊಂದಿಗೆ ಅಲ್ಲಿ ಭಕ್ತಿಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಹಾಸ್ಯ ಲಹರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲ್ಕೂರ ಹೇಳಿದರು.

  ಬೀಚ್ ಆಹಾರೋತ್ಸವವನ್ನು ಎ.4ರ ಅಪರಾಹ್ನ 3ಕ್ಕೆ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ಹಾಗೂ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.

  ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಪ್ರಮೋದ್ ಮಧ್ವರಾಜ್, ನಗರಸಭಾ ಅಧ್ಯಕ್ಷ ಕಿರಣ್‌ಕುಮಾರ್, ಆಯುಕ್ತ ಗೋಕುಲದಾಸ ನಾಯಕ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

  ಈ ಆಹಾರೋತ್ಸವದಲ್ಲಿ ಸುಮಾರು 20,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ನಡೆದ ಬೀಚ್ ಉತ್ಸವದಲ್ಲಿ ಸುಮಾರು 40 ಸಾವಿರ ಜನ ಪಾಲ್ಗೊಂಡಿದ್ದರು.

  ಮೆನು ಏನು?: ಉಡುಪಿಯ ಸಾಂಪ್ರದಾಯಿಕ ತಿನಿಸುಗಳಾದ ಸೇವಿಗೆ ಕೂರ್ಮ, ಗುಂಡ ಮೆಣಸ್ಕಾಯಿ, ಮೂಡೆ ಕೊಡೆಕೆನ, ಅವಲಕ್ಕಿ ವಗ್ಗರಣೆ, ಪುಂಡಿ ಗಟ್ಟಿ, ಪತ್ರೊಡೆ, ಬನ್ಸ್, ಮಸಾಲೆ ದೋಸೆ, ತುಪ್ಪ ದೋಸೆ, ಗೋಳಿ ಬಜೆ, ವಿವಿಧ ರೀತಿಯ ಪೋಡಿಗಳು, ಮಡ್ಡಿ, ಸುರ್ಕುಂಡೆ, ಹಾಲ್‌ಬಾಯಿ, ಹಲಸಿನ ಅಪ್ಪ, ನಿಪ್ಪಟ್ಟು, ಚಕ್ಕುಲಿ ಸೇರಿದಂತೆ 25ಕ್ಕೂ ಅಧಿಕ ಖಾದ್ಯಗಳು ಸಾರ್ವಜನಿಕರಿಗೆ ಕಾದಿದೆ.

  ಬಾಳೆಹಣ್ಣಿನ ರಸಾಯನ, ಇಬ್ಬುಳ ರಸಾಯನ, ಮಾವಿನಹಣ್ಣಿನ ರಸಾಯನ, ಎಳ್ಳು ಜ್ಯೂಸ್, ಹೆಸರುಬೇಳೆ ಪಾಯಸ ಮುಂತಾದ ಪಾನೀಯಗಳನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುವುದು ಎಂದು ಕಲ್ಕೂರ ಹೇಳಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Beach Aahar Utsav a food festival is organised in Malpe beach, Udupi by yuva Brahmin Parishat in association with Karnataka tourism department and Kannada and culture department on April 8 from evening 3 PM to 8 PM.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more