ಬಸ್ ನಿಲ್ದಾಣಗಳು ಬಿಬಿಎಂಪಿಗೆ ಹಣ ಎತ್ತೋ ಕೇಂದ್ರಗಳು

ಏಕೆಂದರೆ ಒಂದು ಕಡೆ, BMTC ಬಸ್ ನಿಲ್ದಾಣಗಳಿಗೆ ಸ್ಥಳಾವಕಾಶ ಕಲ್ಪಿಸುವ ಬೆಂಗಳೂರು ಬೃಹತ್ ನಗರ ಪಾಲಿಕೆ (BBMP) ಅವುಗಳನ್ನು ಸಂಪೂರ್ಣವಾಗಿ ತನ್ನ ಸ್ವಾರ್ಥಕ್ಕೆ ಬಳಸುತ್ತಿದೆ. BMTC ಹೆಸರು ಹೇಳಿಕೊಂಡು ಈ ನಿಲ್ದಾಣಗಳನ್ನು ಐಟಿ ನಗರಿಯ ವೆರೈಟಿಗೆ ತಕ್ಕಂತೆ ಅಂದಚೆಂದದ ಜಾಹೀರಾತುಗಳ ಮೂಲಕ ಹಣ ಎತ್ತುವ ಕೇಂದ್ರಗಳನ್ನಾಗಿ ಪರಿವರ್ತಿಸಿಕೊಂಡಿದೆ.
ಈ ಪ್ರಕ್ರಿಯೆಯಲ್ಲಿ ಬಸ್ ನಿಲ್ದಾಣಗಳ ಮೂಲ ಉದ್ದೇಶಕ್ಕೆ ಎಳ್ಳುನೀರು ಬಿಡಲಾಗಿದೆ. ಇದರಿಂದ ತೊಂದರೆ ಅನುಭವಿಸುತ್ತಿರುವುದು ಮಾತ್ರ ಸಾಮಾನ್ಯ ಪ್ರಯಾಣಿಕ. ಕನಿಷ್ಠ ಬಸ್ ಮಾರ್ಗ್ ಸೂಚಿ, ವೇಳಾಪಟ್ಟಿಯೂ ಅಲ್ಲಿರುವುದಿಲ್ಲ. ದಿಕ್ಕೆಟ್ಟ ಪ್ರಯಾಣಿಕರನ್ನಾಗಿ ಜನನ್ನು ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದೆ BBMP.
ಇಂತಿಪ್ಪ BBMP ಇನ್ನೂ 168 ಬಸ್ ನಿಲ್ದಾಣಗಳನ್ನು ಅರ್ಥಾತ್ ಜಾಹೀರಾತು ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಿದೆ. ಆದರೆ ಇದು ಯಾವ ಪುರುಷಾರ್ಥಕ್ಕೆ? ಎಂದು BBMP ಪ್ರತಿಪಕ್ಷದ ನಾಯಕ ಉದಯಶಂಕರ್ ಕಿಡಿಕಾರಿದ್ದಾರೆ. ಮೊದಲು ಜನೋಪಕಾರಿಯಾಗಿ ನೆಟ್ಟಗೆ ತಲೆಯೆತ್ತಲಿ ಎಂಬುದು ಅವರ ಸದಾಶಯವಾಗಿದೆ.












Click it and Unblock the Notifications