ರಾಮನ ದೆಸೆಯಿಂದ ಕೋಟಿ ಗಳಿಸಿದ ಶಿರಡಿ ದೇಗುಲ

ರಾಮನವಮಿ ಉತ್ಸವದಲ್ಲಿ ಶ್ರೀಸಾಯಿಬಾಬಾ ಸಮಾಧಿ ಮಂದಿರ ಸುಮಾರು 3.9 ಕೋಟಿ ರು ನಗದು ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಉತ್ಸವದ ಸಂದರ್ಭದಲ್ಲಿ ಭಕ್ತರು 696 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿ ಆಭರಣಗಳನ್ನು ದಾನವಾಗಿ ನೀಡಿದ್ದಾರೆ. ಜೊತೆಗೆ ಪ್ರಸಾದ ಮಾರಾಟ ಮೂಲಕ ದೇವಸ್ಥಾನದ ಟ್ರಸ್ಟ್ ಗೆ 60 ಲಕ್ಷ ರು ಆದಾಯ ಸಿಕ್ಕಿದೆ.
ಮುಂಬೈ, ನಾಗ್ಪುರ, ನಾಂದೇಡ್, ಚಾಲಿನ್ ಗಾಂವ್ ಸೇರಿದಂತೆ ದೇಶದ ವಿವಿಧೆಡೆಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಯಥೇಚ್ಛವಾಗಿ ದೇಣಿಗೆ ನೀಡಿದ್ದಾರೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ದೇಗುಲದ ಶಿರಡಿ ದೇಗುಲದ ಆದಾಯ ವಾರ್ಷಿಕವಾಗಿ ಶೇ.20ರಷ್ಟು ಏರಿಕೆಯಾಗುತ್ತಿದೆ. ಭಕ್ತಾದಿಗಳು ಹುಂಡಿಗೆ ಹಾಕಿರುವ ಮೊತ್ತದಲ್ಲಿ 36 ಕೆಜಿ ಚಿನ್ನ, 401 ಕೋಟಿ ರು ನಗದು ಲಭಿಸಿದೆ ಎಂದು ಶಿರಡಿ ಸಾಯಿ ದೇಗುಲ ಟ್ರಸ್ಟಿ ಕಿಶೋರ್ ಅವರು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications