ಸಂಪುಟ ಸರ್ಜರಿ: ದಿಲ್ಲಿಯತ್ತ ಮುಖಮಾಡಿದ ಡಿವಿಎಸ್

ಸದಾನಂದ ಗೌಡರ ಸಂಪುಟದಲ್ಲಿ ಪ್ರಸ್ತುತ 9 ಸಚಿವ ಸ್ಥಾನಗಳು ಖಾಲಿ ಬಿದ್ದಿವೆ - ಏಳು ತಿಂಗಳ ಹಿಂದೆ ಮುಖ್ಯಮಂತ್ರಿ ಕುರ್ಚಿ ಅಲಂಕರಿಸಿದಾಗ ಸದಾನಂದರು ಸ್ವತಃ 5 ಸಚಿವ ಸ್ಥಾನಗಳನ್ನು ಖಾಲಿ ಬಿಟ್ಟುಕೊಂಡಿದ್ದರು. ಬ್ಲೂ ಬಾಯ್ಸ್ ಮೂರು ಸಚಿವ ಸ್ಥಾನಗಳನ್ನು ತೆರವುಗೊಳಿಸಿದರು. ಅದಾದ ನಂತರ ಹಿರಿಯ ನಾಯಕ ಡಾ. ವಿ ಎಸ್ ಆಚಾರ್ಯ ನಿಧನದಿಂದಾಗಿ ಮತ್ತೊಂದು ಸ್ಥಾನ ಖಾಲಿಯಾಯಿತು.
ಯಡಿಯೂರಪ್ಪ ಸೃಷ್ಟಿಸಿರುವ ನಾಯಕತ್ವ ವಿವಾದಕ್ಕೆ ಸೊಪ್ಪುಹಾಕದೆ ಸದಾನಂದ ಗೌಡರ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಬಿಜೆಪಿ ಹೈಕಮಾಂಡ್ ಸಹ ಹೊಸ ಸಚಿವ ಪಟ್ಟಿ ಅನುಮೋದನೆ ನೀಡುವ ಸಾಧ್ಯತೆ ಇದೆ.
ಖಾಲಿಯಿರುವ 9 ಸ್ಥಾನಗಳಿಗೆ ಟವಲ್ ಹಾಕಿರುವ ಸದಸ್ಯರೆಂದರೆ ಮಂಗಳೂರು ಕಡೆಯಿಂದ ಯೋಗೀಶ್ ಭಟ್, ಉಡುಪಿಯಿಂದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಚಿಕ್ಕಮಗಳೂರಿನಿಂದ ಪುರಾತನ ಆಕಾಂಕ್ಷಿಗಳಾದ ಸಿಟಿ ರವಿ, ಡಿಎನ್ ಜೀವರಾಜ್, ಶಿವಮೊಗ್ಗದಿಂದ ಯಡಿಯೂರಪ್ಪ ಕಟ್ಟಾಳು ಬೇಳೂರು ಗೋಪಾಲಕೃಷ್ಣ. ಇನ್ನು, ಮೇಲ್ಮನೆ ಸದಸ್ಯರ ಪೈಕಿ ವಿಮಲಾ ಗೌಡ, ವಿಜಯ್ ಶಂಕರ್ ಹಾಗೂ ಭಾರತಿ ಶೆಟ್ಟಿ ಸಹ ರೇಸ್ ನಲ್ಲಿದ್ದಾರೆ.












Click it and Unblock the Notifications