ಬಾಡಿಗೆ ಜನರಿಂದ ಸನ್ಮಾನ ಬೇಡ್ವೇ ಬೇಡ: ಡಿವಿಎಸ್

'ನಮ್ಮದೇ ಸರಕಾರವಿದ್ದರೂ, ಆಡಳಿತದಲ್ಲಿ ಸ್ವಲ್ಪ ಸಮಸ್ಯೆಯಿದೆ' ಎಂದು ಸದಾನಂದಗೌಡರನ್ನು ಯಡಿಯೂರಪ್ಪ ಕೆಣಕಿದ್ದರು. ಅದಕ್ಕೆ ಉತ್ತರಿಸಿರುವ ಸದಾನಂದರು 'ಬರ ಬಿದ್ದು ಜನ ಸಂಕಟದಲ್ಲಿರುವಾಗ ಬಾಡಿಗೆ ಜನರನ್ನು ಕರೆಸಿಕೊಂಡು ಬಂದು ಸನ್ಮಾನ ಮಾಡಿಸಿಕೊಳ್ಳುವ ತೆವಲು ನನಗಿಲ್ಲ' ಎಂದಿದ್ದಾರೆ.
'ಕೆಲವು ಶಾಸಕರು, ಸಚಿವರು ಸೇರಿಕೊಂಡು ನನಗೆ ಸನ್ಮಾನ ಮಾಡಲು ಆಯೋಜಿಸಿದ್ದಾರೆ' ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂತು. ಆದರೆ ಅದಕ್ಕಾಗಿ ಬಾಡಿಗೆ ಬಸ್ಸುಗಳು, ಅದರ ತುಂಬ ಜನರನ್ನು ಕರೆದುಕೊಂಡು ಬಂದು ಸುಳ್ಳೇ ಸನ್ಮಾನ ಮಾಡಿಸಿಕೊಳ್ಳುವ ಜರೂರತ್ತು ನನಗಿಲ್ಲ' ಎಂದು ಸದಾನಂದರು ಸೋಮವಾರ ಬೆಳಗ್ಗೆ ಯಡ್ಡಿಗೆ ಕುಟುಕಿದ್ದಾರೆ.
ಕಳೆದ ವಾರ ಬೆಂಗಳೂರಿನಲ್ಲಿ ಯಡಿಯೂರಪ್ಪ ನಡೆಸಿದ 'ಫುಡ್ ಪಾಲಿಟಿಕ್ಸ್'ಗೂ ಸದಾನಂದರು ಹೀಗೆ ತಿರುಗೇಟು ನೀಡಿದ್ದರು. 'ಊಟ ಹಾಕಿಸಿ, ಜನರನ್ನು ಸಾಕುವ ಅನಿವಾರ್ಯ ಕರ್ಮ ನನಗಿಲ್ಲ. ಅದರ ಹಂಗೂ ಎನಗಿಲ್ಲ ಎಂದಿದ್ದರು.












Click it and Unblock the Notifications