ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿದರಿ ನರರೂಪದ ರಕ್ಕಸ, ಗಡಾಫಿ : ಕೋರ್ಟ್

By Mahesh
|
Google Oneindia Kannada News

Shankar Bidari worse than Gaddafi
ಬೆಂಗಳೂರು, ಮಾ.31: ವಿವಾದದ ಗೂಡಾಗಿದ್ದ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ ನೇಮಕಾತಿಗೆ ಪರಿಹಾರ ಸಿಕ್ಕಿದೆ. ಕೇಂದ್ರ ಆಡಳಿತ ನ್ಯಾಯಮಂಡಳಿ(CAT) ಹಾಲಿ ಡಿಜಿ ಐಜಿಪಿ ಶಂಕರ್ ಬಿದರಿ ಅವರ ನೇಮಕಾತಿಯನ್ನು ರದ್ದುಗೊಳಿಸಿದೆ. ಸಿಎಟಿ ವರದಿಯನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್, ಶಂಕರ್ ಬಿದರಿಯನ್ನು ನರರೂಪದ ರಕ್ಕಸ, ಸದ್ದಾಂ ಹುಸೇನ್, ಮುಹಮ್ಮರ್ ಗಡಾಫಿಗಿಂತ ಭೀಕರ ವ್ಯಕ್ತಿ ಎಂದು ವರದಿ ಆಧಾರದ ಮೇಲೆ ಕೋರ್ಟ್ ಹೇಳಿದೆ.

ಕಾಡುಗಳ್ಳ ವೀರಪ್ಪನ್ ಸೆರೆ ಹಿಡಿಯಲು ತೆರಳಿದ್ದ ವಿಶೇಷ ಕಾರ್ಯ ಪಡೆ (STF) ಮುಖ್ಯಸ್ಥರಾಗಿದ್ದ ಬಿದರಿ ಅವರು ವಿಧವೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈರಮ್ಮ ಎಂಬುವವರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಪೈಶಾಚಿಕವಾಗಿ ವರ್ತಿಸಿದ ಎಸ್ ಟಿಎಫ್ ಪಡೆ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದೆ. ಈ ಈರಮ್ಮನ ಪತಿ ವೀರಪ್ಪನ್ ಗೆ ಮಾಹಿತಿದಾರನಾಗಿದ್ದ ಎಂಬ ಕಾರಣಕ್ಕೆ ಈ ರೀತಿ ಅಮಾನವೀಯವಾಗಿ ಬಿದರಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೆ ಅನುಮಾನ ಬಂದವರ ಮೇಲೆ ವಿದ್ಯುತ್ ಶಾಕ್ ಪ್ರಯೋಗ, ಚಿತ್ರಹಿಂಸೆ ನೀಡುವುದು ಎಗ್ಗಿಲ್ಲದೆ ನಡೆದಿದೆ. ಮಾನವ ಹಕ್ಕುಗಳ ಆಯೋಗ ತನ್ನ ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಆದರೆ, ಬಿದರಿ ಒಬ್ಬರೇ ಕಾರಣರಲ್ಲ ಎಂದು ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಿತ್ತು. ಎಸ್ ಟಿಎಫ್ ಕಾರ್ಯಾಚರಣೆಯಲ್ಲಿ ಒಟ್ಟು 66 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ 36 ಜನರ ಸಾವು ಅನುಮಾನಕ್ಕೆ ಈಡುಮಾಡಿದೆ. ಆದರೆ, ಶಂಕರ್ ಬಿದರಿ ಅವರು ವರದಿಯನ್ನು ಅಲ್ಲಗೆಳೆದಿದ್ದು, ಮಾನವ ಹಕ್ಕು ಉಲ್ಲಂಘನೆ ಆಗುವ ಯಾವ ಕೃತ್ಯವೂ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

English summary
Raining criticism on Bidari, the court commented that he was 'worse than Saddam Hussein or Muammar Gaddafi' for alleged atrocities committed by the Special Task Force (STF). Bidari was leading the STF during the manhunt to nab dacoit Veerappan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X