ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿ ಬಂಧನವಿಲ್ಲದೆ ಚಾರ್ಜ್ ಶೀಟ್ ಸಲ್ಲಿಕೆ?

By Mahesh
|
Google Oneindia Kannada News

YS Jagan Mohan Reddy
ಹೈದರಾಬಾದ್, ಮಾ.28: ಈ ವಾರದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಭವಿಷ್ಯ ನಿರ್ಧರಿಸುವ ಹುಮ್ಮಸ್ಸಿನಲ್ಲಿ ಸಿಬಿಐ ತಂಡವಿದೆ. ಆದರೆ, ಅಕ್ರಮ ಅಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಂ.1 ಜಗನ್ ಬಂಧಿಸದೇ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದೆ.

ಸಿಬಿಐ ನಿರ್ದೇಶಕ ಎಪಿ ಸಿಂಗ್ ಜೊತೆ ದೆಹಲಿಯಲ್ಲಿ ಮಾತುಕತೆ ನಡೆಸುತ್ತಿರುವ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿ ನಾರಾಯಣ ಅವರು ನಂತರ ಪಿ ಚಿದಂಬರಂ ಅವರನ್ನು ಭೇಟಿ ಮಾಡಲಿದ್ದಾರೆ.

ಜಗನ್ ಬಂಧಿಸಲು ಸಾಕಷ್ಟು ಪುರಾವೆಗಳು ಸಿಗದ ಕಾರಣ, ಬಂಧನದ ಅವಶ್ಯಕತೆ ಇಲ್ಲ ಎಂದು ಷರಾ ಬರೆಯಲು ಸಿಬಿಐ ಕೈಗಳು ಸಿದ್ಧವಾಗಿದೆ ಎಂಬ ಸುದ್ದಿ ಇದೆ.

ಇದೇ ಮೊದಲು: ಸಾಕ್ಷಿ ಇಲ್ಲದೆ ಜಗನ್ ಬಂಧಿಸಿದ್ದಾರೆ ಎಂದು ಸುದ್ದಿ ಹಬ್ಬಿದರೆ ಆಂಧ್ರದಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸುತ್ತದೆ ಎಂಬ ಯುಪಿಎಗಿದೆ.

ಮಾ.30 ರೊಳಗೆ ಸಿಬಿಐ ನಿರ್ಧರಿಸಲು ಸಾಧ್ಯವಾಗದಿದ್ದರೆ, ಇನ್ನೊಂದು ಪ್ಲ್ಯಾನ್ ಕೂಡಾ ರೆಡಿ ಇದೆ. ಚಾರ್ಜ್ ಶೀಟ್ ಸಲ್ಲಿಸಿದ ನಂತರ ಕೋರ್ಟ್ ಸಹಜವಾಗಿ ಆರೋಪಿ ನಂ.1 ಹೆಸರು ನಾಪತ್ತೆಯಾಗಿರುವ ಬಗ್ಗೆ ಪ್ರಶ್ನಿಸುತ್ತದೆ.

ಆಗ, ತನಿಖೆ ಇನ್ನೂ ಚಾಲ್ತಿಯಲ್ಲಿದೆ. ಹಾಗಾಗಿ ಪೂರಕ ಚಾರ್ಜ್ ಶೀಟ್ ನಲ್ಲಿ ಆರೋಪಿ ನಂ.1 ಜಗನ್ ಹೆಸರು ಸೇರಿಸುತ್ತೇವೆ ಎಂದು ಹೇಳಲು ಸಿಬಿಐ ನಿರ್ಧರಿಸಿದೆ.

ಸಿಬಿಐ ತನಿಖಾ ವಿಧಿಯಲ್ಲಿ ಇದೇ ಮೊದಲ ಬಾರಿಗೆ accused number 1 ಹೆಸರಿಲ್ಲದೆ ಚಾರ್ಜ್ ಶೀಟ್ ಸಲ್ಲಿಸಲಾಗುತ್ತಿದೆ. ಓಬಳಾಪುರಂ ಮೈನಿಂಗ್ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಆರೋಪಿ ನಂ.1(A1) ಆಗಿದ್ದಾರೆ. ಎಮ್ಮಾರ್ ಪ್ರಕರಣದಲ್ಲಿ ಐಎಎಸ್ ಆಧಿಕಾರಿ ಬಿಪಿ ಆಚಾರ್ಯ A1 ಆಗಿದ್ದಾರೆ. ಆದರೆ, ಜಗನ್ ಮಾತ್ರ A1 ಆದರೂ ಬಂಧನದ ಭೀತಿಯಿಂದ ಪಾರಾಗಿದ್ದಾರೆ.

English summary
It is likely that CBI team lead by joint director VV Lakshmi Narayana will submit chargesheet without mentioning accused No.1 in illegal assets case of YS Jagan Mohan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X