ಜ್ಯುವೆಲ್ಲರ್ಸ್ ಮಾಲೀಕ ನಿತೇಶ್ ಕಿಡ್ನಾಪ್, ಕೊಲೆ

ಶಾಂತಿನಗರದ ಭಂಗಿಯಪ್ಪ ಗಾರ್ಡನ್ ನಲ್ಲಿರುವ ಮಾಣಿಕ್ಯ ಅಪಾರ್ಟ್ಮೆಂಟ್ ನ ನಿವಾಸಿ ನಿತಿಶ್ ಬೆಹ್ರಾ ಅವರು ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಅವಿನ್ಯೂ ರಸ್ತೆಯಲ್ಲಿರು ಬಿಆರ್ ಎನ್ ಜ್ಯುವೆಲ್ಲರ್ಸ್ ಅಂಗಡಿ ಬಿಟ್ಟು ಮನೆ ಕಡೆಗೆ ಹೊರಟಿದ್ದರು. ಆದರೆ, ಬೆಹ್ರಾ ಅವರನ್ನು ಹಿಂಬಾಲಿಸುತ್ತಿದ್ದ ಅಪಹರಣಕಾರರು ಅವರ ದ್ವಿಚಕ್ರ ವಾಹನ ಸಮೇತ ಕಿಡ್ನಾಪ್ ಮಾಡಿ ನಗರದ ಹೊರವಲಯಕ್ಕೆ ಕರೆದೊಯ್ದು ಕೊಲೆ ಗೈದಿದ್ದಾರೆ.
ನೆಲಮಂಗಲದ ದಾಬಸ್ ಪೇಟೆ ಬಳಿಯ ಗೂಬೆ ಗುಡ್ಡದಲ್ಲಿ ಬುಧವಾರ(ಮಾ.28) ಪತ್ತೆಯಾಗಿದ್ದು, ಕುಟುಂಬದವರು ನಿತೀಶ್ ಶವವನ್ನು ಗುರುತಿಸಿದ್ದಾರೆ ಎಂದು ಅಶೋಕ್ ನಗರ ಪೊಲೀಸರು ಹೇಳಿದ್ದಾರೆ.
24 ಗಂಟೆಗಳಲ್ಲಿ ಮನೆಯಲ್ಲಿರುತ್ತಾರೆ: ಬೆಹ್ರಾ ಅವರು ಸುರಕ್ಷಿತವಾಗಿ ಮನೆಗೆ ಬರುತ್ತಾರೆ. ಮೂರು ತಂಡಗಳನ್ನು ರಚಿಸಿ ಅಪಹರಣಕಾರರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ನೀಡಿದ್ದ ಭರವಸೆ ಹುಸಿಯಾಗಿದೆ.












Click it and Unblock the Notifications