ಪತ್ನಿ, ಪುತ್ರನ ಜತೆ ಊಟ ಮಾಡಿದ ರೆಡ್ಡಿ

ಪತಿಯನ್ನು ಕಾಣಲು ಅರುಣಾ ತಮ್ಮ ಪುತ್ರನೊಡಗೂಡಿ ಜೈಲಿಗೆ ಬಂದರು. ಸೆರೆಮನೆಯಲ್ಲಿ ಬಂಧಿಯಾಗಿರುವ ಗಂಡನನ್ನು ಕಂಡು ಅರುಣಾ ಭಾವುಕರಾದರು ಎಂದು ಕಾರಾಗೃಹ ಮೂಲಗಳು ತಿಳಿಸಿವೆ. ಆರು ತಿಂಗಳ ಹಿಂದೆ (ಸೆ. 5) ಆಂಧ್ರ ಸಿಬಿಐನಿಂದ ಬಂಧನಕ್ಕೊಳಗಾದ ರೆಡ್ಡಿಯನ್ನು ಚಂಚಲಗೂಡ ಜೈಲಿನಲ್ಲಿ ಅವರ ಪತ್ನಿ ಅರುಣಾ ಒಮ್ಮೆ ಭೇಟಿಯಾಗಿದ್ದರು.
ಆಗ, ರೆಡ್ಡಿ ತಮ್ಮ 46ನೇ ಹುಟ್ಟುಹಬ್ಬದಂದು (ಜನವರಿ 11) ಇಡೀ ಕುಟುಂಬದ ಜತೆ ಜೈಲಿನಲ್ಲಿ ಕಾಲ ಕಳೆದಿದ್ದರು. ಅದಾದನಂತರ ನಿನ್ನೆ ಎರಡನೆಯ ಬಾರಿಗೆ ಬೆಂಗಳೂರು ಜೈಲಿನಲ್ಲಿ ಮುಖಾಮುಖಿಯಾದರು. ಸೋದರ ಸೋಮಶೇಖರ ರೆಡ್ಡಿ ಸಹ ನಿನ್ನೆ ರೆಡ್ಡಿಯನ್ನು ಕಂಡು ಮಾತನಾಡಿಸಿದ್ದಾರೆ.
ಜನಾ ರೆಡ್ಡಿ 2 ಗಂಟೆಗಳ ಕಾಲ ಪತ್ನಿ ಹಾಗೂ ಪುತ್ರನ ಜತೆ ಕಾಲ ಕಳೆದರು. ಈ ವೇಳೆ ಅವರು ತುಂಬ ಉಲ್ಲಸಿತರಾಗಿದ್ದರು ಎನ್ನಲಾಗಿದೆ. ಆ ವೇಳೆಯಲ್ಲಿ ಮನೆಯಿಂದ ಪತಿಗಾಗಿ ತಂದಿದ್ದ ವಿಶೇಷ ಅಡುಗೆಯನ್ನು ಅಡುಗೆಯನ್ನು ಅರುಣಾ ಸ್ವತಃ ಕೈಯಾರೆ ಬಡಿಸಿದರು. ಒಟ್ಟಿನಲ್ಲಿ ಬಹುದಿನಗಳ ಬಳಿಕ ರೆಡ್ಡಿ, ಮಡದಿ ಮತ್ತು ಮಗನೊಂದಿಗೆ ಒಟ್ಟಿಗೆ ಕುಳಿತು ಊಟ ಸವಿದರು.












Click it and Unblock the Notifications