ಫಿಸಿಕ್ಸ್ ಪೇಪರ್ ಲೀಕ್ ಭಯ, ವಿದ್ಯಾರ್ಥಿನಿ ಸೂಸೈಡ್

ಹೌದು, ಫಿಸಿಕ್ಸ್ ಪೇಪರ್ ಮತ್ತೆ ಲೀಕ್ ಆಗಿದೆ. ಆದರೆ, ಈ ಬಾರಿ ಎಸ್ ಎಂಎಸ್ ಮೂಲಕ ಟಿವಿ ಮಾಧ್ಯಮಗಳ ಕಚೇರಿಗೆ 40 ಪ್ರಶ್ನೆಗಳ ಪೈಕಿ 30 ಪ್ರಶ್ನೆಗಳು ಮಂಗಳವಾರ ಬೆಳಗ್ಗೆ 2.45 ರ ಸುಮಾರಿಗೆ ತಲುಪಿದೆ. ಈ 30 ಪ್ರಶ್ನೆಗಳ ಪೈಕಿ 6 ಪ್ರಶ್ನೆಗಳು ಟ್ಯಾಲಿ ಆಗುತ್ತಿರುವುದು ಆತಂಕದ ವಿಷಯವಾಗಿದೆ.
ಆದರೆ, ಫಿಸಿಕ್ಸ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮೃತಪಟ್ಟ ವಿದ್ಯಾರ್ಥಿನಿಗೆ ಹೇಗೆ ಮಾಹಿತಿ ಸಿಕ್ಕಿತೋ ಗೊತ್ತಿಲ್ಲ. ಮತ್ತೊಮ್ಮೆ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದರಿಂದ ತೀವ್ರವಾಗಿ ನೊಂದ ದಾವಣಗೆರೆಯ ಕಾಲೇಜಿನ ವಿದ್ಯಾರ್ಥಿನಿ ಶ್ಯಾಮಲಾ(ಹೆಸರು ಬದಲಿಸಲಾಗಿದೆ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಚಿವ ಕಾಗೇರಿ ಉತ್ತರ: ಸಾರ್ವಜನಿಕರು ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ಯಾವುದೇ ಎಸ್ ಎಂಎಸ್ ಗಳನ್ನು ನಂಬುವುದು ಬೇಡ. ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತಿರುವ ದುಷ್ಟರ ವಿರುದ್ಧ ಸಿಐಡಿ ತನಿಖಾ ವರದಿ ಆಧಾರಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸದನದಲ್ಲಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.












Click it and Unblock the Notifications