ಕಿಂಗ್ ಫಿಷರ್ ಶೇ.50 ರಷ್ಟು ಉದ್ಯೋಗಿಗಳು ವಜಾ

Kingfisher to axe 50 percent staff
ನವದೆಹಲಿ, ಮಾ.27: ಕಿಂಗ್ ಫಿಷರ್ ಏರ್ ಲೈನ್ಸ್ ನ ಶೇ.50 ರಷ್ಟು ಉದ್ಯೋಗಿಗಳನ್ನು ಹೊರದಬ್ಬಲು ಸಂಸ್ಥೆ ನಿರ್ಧರಿಸಿದೆ ಎಂದು ಕಿಂಗ್ ಫಿಷರ್ ನ ವಕ್ತಾರರು ಮಂಗಳವಾರ(ಮಾ.27) ಹೇಳಿದ್ದಾರೆ.

ಸಿಬ್ಬಂದಿ ಕಡಿತದ ಬಗ್ಗೆ ಮಂಗಳವಾರ ಸಂಜೆ ವೇಳೆಗೆ ಈ ಬಗ್ಗೆ ವಿಜಯ್ ಮಲ್ಯ ಅವರು ಅಧಿಕೃತವಾಗಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
76 ಕೋಟಿ ರು ಸೇವಾ ತೆರಿಗೆಯಲ್ಲಿ ಕೇವಲ 10 ಕೋಟಿ ರು ಮಾತ್ರ ಕಟ್ಟಲು ಸಾಧ್ಯ ಎಂದು ಕಿಂಗ್ ಫಿಷರ್ ಹೇಳಿತ್ತು.

ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ಒದಗಿಸಿ, ಸುರಕ್ಷತೆಗೆ ಒತ್ತು ನೀಡುವಂತೆ ಮಲ್ಯ ಅವರಿಗೆ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರು ಸೂಚಿಸಿದ್ದಾರೆ.

ಸಿಬ್ಬಂದಿಗಳಿಗೆ ಹಲವು ತಿಂಗಳಿನಿಂದ ಸಂಬಳ ನೀಡಲಾರದೆ ಕಷ್ಟಪಡುತ್ತಿರುವ ಕಿಂಗ್ ಫಿಷರ್ ಸಂಸ್ಥೆ ಕೊನೆ ಉಪಾಯ ಎಂಬಂತೆ ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ಲೈಸನ್ಸ್ ರದ್ದು ಮಾಡುವ ಬಗ್ಗೆ ಡಿಜಿಸಿಎ ಇನ್ನೂ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಈ ನಡುವೆ ಸಿಬ್ಬಂದಿ ಕಡಿತದ ಸಂಖ್ಯೆ ಕಮ್ಮಿಯಾಗುವ ಸಾಧ್ಯತೆಯಿದೆ. ಕಾರಣ, ಈಗಾಗಲೇ ಅನೇಕ ಉದ್ಯೋಗಿಗಳು ಕೆಲಸ ತೊರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+