ಪೆಟ್ರೋಲ್ ಬೆಲೆ 11 ರೂ. ಇಳಿಸಿದ ಬಿಜೆಪಿ ಸರ್ಕಾರ

ಇದರಿಂದಾಗಿ ಅಲ್ಲಿ ಇನ್ನು ಮುಂದೆ ಪೆಟ್ರೋಲ್ ಬೆಲೆ ಲೀಟರಿಗೆ 11 ರೂ. ನಷ್ಟು ಇಳಿಕೆಯಾಗಲಿದೆ. ಅಂದರೆ ಅಕ್ಕಪಕ್ಕದ ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕಿಂತ 20 ರುಪಾಯಿ ಕಡಿಮೆಯಾಗಿದೆ! ಕರ್ನಾಟಕದ ಬಿಜೆಪಿ ಸರಕಾರ ಇದರಿಂದೇನಾದರೂ ಪ್ರೇರಣೆ ಪಡೆಯುವುದಾ?
ಸೋಮವಾರ ಬಿಜೆಪಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಮನೋಹರ್ ಪಾರಿಕರ್, ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ.0.1ಕ್ಕೆ ಇಳಿಸಲಾಗಿದೆ. ಇದರಿಂದಾಗಿ 65 ರೂ. ಇದ್ದ ಪೆಟ್ರೋಲ್ ಬೆಲೆ 54 ರೂ.ಗೆ ಇಳಿಯಲಿದೆ ಎಂದು ಘೋಷಿಸಿದರು. ಈ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ 100 ಕೋಟಿ ರೂ. ಹೊರೆಯಾಗಲಿದೆ.
ಗೃಹಿಣಿಯರ ಕಣ್ಣೊರೆಸಿದ ಮುಖ್ಯಮಂತ್ರಿ: ಇದಲ್ಲದೆ ಹಾಲಿ ಇರುವ ಅಡುಗೆ ಅನಿಲದ ಬೆಲೆಯನ್ನೇ ಮುಂದಿನ 5 ವರ್ಷಗಳ ಕಾಲ ಕಾಯ್ದುಕೊಳ್ಳಲಾಗುವುದು. ಒಂದು ವೇಳೆ ಕೇಂದ್ರ ಸರ್ಕಾರ ಎಲ್‌ಪಿಜಿ ಬೆಲೆಯನ್ನು ಏರಿಸಿದರೂ, ಆ ಹೊರೆಯನ್ನು ಸರ್ಕಾರವೇ ಹೊತ್ತುಕೊಳ್ಳಲಿದೆ ಎಂದೂ ಘೋಷಿಸಿದರು.












Click it and Unblock the Notifications