ರೈಲ್ವೆ ಇಲಾಖೆಗೆ ಒಂದು ಲಕ್ಷ ಸಿಬ್ಬಂದಿ ನೇಮಕ
ಬೆಂಗಳೂರು,ಮಾ,
26: ರೈಲ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಅದನ್ನು ನೀಗಿಸಲು ಒಂದು ಲಕ್ಷ ಮಂದಿಯನ್ನು ನೇಮಕ ಮಾಡಿಕೊಳ್ಳಬೇಕಿದ್ದು, ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಪ್ರಕಟಿಸಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. id="toptextpromo">ಮೈಸೂರು-ಬೆಂಗಳೂರು
ನಗರಗಳನ್ನು ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರಗಳ ಮಾದರಿಯಲ್ಲಿ ಅಭಿವದ್ಧಿಪಡಿಸಲಾಗುವುದು. ಮೈಸೂರು-ಬೆಂಗಳೂರು ನಡುವಿನ ರೈಲು ಸೇವೆ ಮತ್ತಷ್ಟು ವಿಸ್ತಾರಗೊಳ್ಳಬೇಕಿದೆ. ಪ್ರಯಾಣ ಇನ್ನಷ್ಟು ತ್ವರಿತವಾಗಬೇಕಿದ್ದು, ಇದು ಸಾಧ್ಯವಾದರೆ ಉಭಯ ನಗರಗಳ ನಡುವೆ ಸಂಚಾರಕ್ಕೆ ಹಾದಿ ಸುಗಮವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು. id='are-slot-1' class='oiad oi-axt oiadv'> id='top-searched-articles'>ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ
ರೈಲ್ವೆ ಮಾರ್ಗ ಸಿದ್ಧವಾಗಿದ್ದು ಆದಷ್ಟು ಬೇಗ ರೈಲು ಸಂಚಾರವನ್ನು ಆರಂಭಿಸಲಾಗುವುದು. ಈಗಾಗಲೇ ತಾಳಗುಪ್ಪದಿಂದ ಮೈಸೂರು, ಹಾಸನಕ್ಕೆ ರೈಲು ಸಂಚಾರ ಆರಂಭವಾಗಿದ್ದು, ಸದ್ಯದಲ್ಲೇ ಬೆಂಗಳೂರು-ತಾಳಗುಪ್ಪ ರೈಲು ಮಾರ್ಗ ಕಾರ್ಯಾರಂಭ ಮಾಡಲಿದೆ ಎಂದರು.











Click it and Unblock the Notifications