ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪನ್ಯಾಸಕರ ಅಮಾನತಿಗೆ ನಾರಾಯಣಸ್ವಾಮಿ ತಕರಾರು

By * ಚ.ಶ್ರೀನಿವಾಸಮೂರ್ತಿ
|
Google Oneindia Kannada News

MLC Y.A. Narayanaswamy
ಕೋಲಾರ, ಮಾ. 26 : ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ವಿಚಾರದಲ್ಲಿ ಉಪನ್ಯಾಸಕರನ್ನು ಅಮಾನತು ಪಡಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ಆತುರದ ಕ್ರಮ ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲೆಯ ಚಿಂತಾಮಣಿಯ ಮೂವರು ಶಿಕ್ಷಕರು ಈ ಘಟನೆಯಲ್ಲಿ ಸಿಕ್ಕುಬಿದ್ದಿದ್ದಾರೆ.

ಅವರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಶ್ನೆ ಪತ್ರಿಕೆ ಬಹಿರಂಗ ವಿಚಾರದಲ್ಲಿ ಎಲ್ಲಿ ಏನು ನಡೆದಿದೆ ಎಂಬ ಮಾಹಿತಿ ಇನ್ನೂ ಸ್ಪಷ್ಟ ಇಲ್ಲ. ಆಗಲೆ 14 ಜನ ಉಪನ್ಯಾಸಕರನ್ನು ಅಮಾನತ್ತು ಮಾಡಿರುವುದು ಖಂಡನಿಯ ಎಂದರು.

ಪ್ರಶ್ನೆಪತ್ರಿಕೆ ಬಹಿರಂಗವಾಗಿರುವುದು ಆತಂಕಕಾರಿಯಾದ ವಿಚಾರ. ಇಂತಹ ಘಟನೆಗಳು ಮರುಕಳಿಸದಂತೆ ಈ ವಿಚಾರವಾಗಿ ಸಿಬಿಐ ವತಿಯಿಂದ ಸಮಗ್ರ ತನಿಖೆಯಾಗಬೇಕಿದೆ. ಈ ಮೂಲಕ ನಿಜವಾದ ತಪಿತಸ್ಥರು ಯಾರು ಎಂಬ ಸತ್ಯಾಂಶ ಹೊರಬಿಳುತ್ತದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಪ್ರೌಡಶಾಲೆ ಶಿಕ್ಷಕರಿಗೆ 6ನೇ ವೇತನ ನೀಡಿರುವುದು ಶಿಕ್ಷಕರ ಹೋರಾಟಕ್ಕೆ ಸಂದ ಜಯ ಎಂದು ಅಭಿಪ್ರಾಯಪಟ್ಟರು.

ಮಾರ್ಚ್ 24ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ರಾಜ್ಯಾದ್ಯಂತ ಮತ್ತೆ ಆರಂಭವಾಗಿದ್ದು, ಏಪ್ರಿಲ್ ಐದರವರೆಗೆ ನಡೆಯಲಿವೆ. ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದಿಂದಾಗಿ ಎಲ್ಲೆಡೆ ಬಿಗಿ ಭದ್ರತೆಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ. [ಪರಿಷ್ಕೃತ ವೇಳಾಪಟ್ಟಿ]

English summary
Member of Legislative Council Y.A. Narayanaswamy from Kolar has objected to the suspension of teachers allegedly involved in leakage of 2nd PU papers. He said, nothing is proved yet, so action was unwarranted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X