ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೊಟ್ಟಿ ಕೆಳಗಿತ್ತು ವಿಜಯನಗರ ಕಾಲದ ಚಿನ್ನದ ನಾಣ್ಯಗಳು

By Srinath
|
Google Oneindia Kannada News

bellary-sandur-antique-gold-coins-found
ಬಳ್ಳಾರಿ, ಮಾ. 25: ತಾಲೂಕಿನ ಸಂಡೂರಿನಲ್ಲಿ ಮನೆಯ ತೊಟ್ಟಿಗಾಗಿ ನೆಲ ಅಗೆಯುವಾಗ ಪುರಾತನ ಕಾಲದ 213 ಬಂಗಾರದ ನಾಣ್ಯಗಳು ಸೇರಿದಂತೆ ಒಟ್ಟು 720 ಗ್ರಾಂ ತೂಕದ ಚಿನ್ನ ಇತ್ತೀಚೆಗೆ ದೊರೆತಿದೆ. ಈ ನಾಣ್ಯಗಣ ಮೇಲೆ ಶಿವ, ಪಾರ್ವತಿ ಮತ್ತು ಚಂದ್ರಮನ ಚಿತ್ರಗಳನ್ನು ಕೆತ್ತಲಾಗಿದೆ.

ಇವು ಮೊಘಲ್‌ ಇಲ್ಲವೇ ವಿಜಯನಗರ ಕಾಲದ್ದು. ಇವುಗಳ ಈಗಿನ ಮಾರುಕಟ್ಟೆ ಮೌಲ್ಯ 18 ಲಕ್ಷ. ಆದರೆ ಪುರಾತತ್ವ ವಸ್ತು ಲೆಕ್ಕದಲ್ಲಿ ಇದರ ಮೌಲ್ಯ ಇನ್ನೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಸಂಡೂರಿನ 7ನೇ ವಾರ್ಡಿನಲ್ಲಿರುವ ಎಲಿಗಾರ್‌ ಓಣಿಯ ಕಪ್ಪಗಲ್‌ ವೀರೇಶ ಮನೆ ಕಟ್ಟಿಸುತ್ತಿದ್ದು ಮನೆಯ ಮುಂಭಾಗದಲ್ಲಿ ತೊಟ್ಟಿಗಾಗಿ ಗುಂಡಿ ತೋಡುವಾಗ ಈ ನಾಣ್ಯಗಳು ಪತ್ತೆಯಾಗಿವೆ. ಇವು 300 ವರ್ಷಗಳಿಗೂ ಹಳೆಯದಾದ ನಾಣ್ಯಗಳು ಎಂದು ಹೇಳಲಾಗಿದೆ. ಈ ಬಂಗಾರ ನಾಣ್ಯಗಳು ಸದ್ಯ ಪೊಲೀಸ್‌ ವಶದಲ್ಲಿವೆ.

ಏನೇನು ಸಿಕ್ತು?: 213 ಬಂಗಾರದ ನಾಣ್ಯ, 100 ಚಿಕ್ಕ ಬಂಗಾರದ ಗುಂಡು, ಒಂದು ಬೆಳ್ಳಿ ತಂತಿ, 6 ಬಂಗಾರದ ಪದಕ ಸೇರಿ ಒಟ್ಟು 720 ಗ್ರಾಂ ಚಿನ್ನ ದೊರೆತಿದೆ. ನಾಣ್ಯಗಳಲ್ಲಿ ಹಿಂದಿ, ಉರ್ದು ಲಿಪಿ ಇದ್ದು, ಹಿಂದೂ ದೇವ-ದೇವತೆಗಳ ಚಿತ್ರಗಳಿವೆ. ವಿಷಯ ತಿಳಿದ ಡಿವೈಎಸ್ಪಿ ಗಜಕೋಶ, ಸಂಡೂರು ಸಿಪಿಐ ಅಶೋಕ ಕುಮಾರ, ಕಂದಾಯ ಶಿರಸ್ತೇದಾರ ಎಸ್‌ ಎಸ್‌ ಕಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

English summary
Sandur, Bellary: A total of 213 antique gold coins, depicting the images of Lord Shiva, his consort Parvati and the Moon, were found by the house owner while digging a tank at his house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X